ರಸ್ತೆ ದುರಸ್ತಿಗೆ 122 ಕೋಟಿ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Krishna-Byregowda

ಬೆಂಗಳೂರು,ಜು.13- ಮಳೆಯಿಂದ ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸಲು ತುರ್ತು ಕಾಮಗಾರಿ ಕೈಗೊಳ್ಳಲು 122 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ವಿಧಾನಸಭೆಗೆ ತಿಳಿಸಿದರು.   ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯಿಂದಾ ರಸ್ತೆಗಳು ಹೆಚ್ಚು ಹಾಳಾಗಿವೆ. ಹಾಳಾದ ರಸ್ತೆಗಳ ದುರಸ್ತಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಟಾಕ್ ಪೋಸ್ ರಚಿಸಲಾಗುವುದು. ಶಾಸಕರ ಮಾರ್ಗದರ್ಶನದಲ್ಲಿ ರಸ್ತೆ ದುರಸ್ತಿ ಗೊಳಿಸುವ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾಧಿಕಾರಿಗಳು ಬಳಿ ಇರುವ ಹಣದಿಂದ ಮಳೆಯಿಂದ ಹಾನಿಗೀಡಾಗಿರವು ರಸ್ತೆ ದುರಸ್ತಿಗೊಳಿಸಲು ಹಣ ಸಾಲುವುದಿಲ್ಲ ಎಂಬ ಶಾಸಕರ ಅಭಿಪ್ರಾಯದ ಹಿನ್ನೆಲೆಯಲ್ಲಿ ತುರ್ತು ಆಗಿ ಈ ಹಣ ಬಿಡುಗಡೆ ಮಾಡಲಾಗಿದೆ ಎಂದು ಸದನಕ್ಕೆ ತಿಳಿಸಿದರು.

Facebook Comments

Sri Raghav

Admin