ರೈಲಿನಲ್ಲೇ ಇಬ್ಬರು ಮಹಿಳೆಯರ ರೇಪ್ ಅಂಡ್ ಮರ್ಡರ್..! ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Train-Rape--01

ಗುವಾಹತಿ, ಜು.14-ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿ ಶವಗಳನ್ನು ಶೌಚಾಲಯಗಳಲ್ಲಿ ಎಸೆದಿರುವ ಘಟನೆ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ನಡೆದಿದೆ. ಈ ಸಂಬಂಧ ಅಸ್ಸಾಂ ಪೊಲೀಸರು ದಿಬ್ರುಗಢ್ ಜಿಲ್ಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಿಕಾಶ್ ದಾಸ್ ಮತ್ತು ಬಿಪಿನ್ ಪಾಂಡೆ ಬಂಧಿತ ಅತ್ಯಾಚಾರಿ ಹಂತಕರು. ಇವರಿಬ್ಬರು ಸ್ನೇಹಿತರಾಗಿದ್ದು, ಮಹಿಳೆಯರ ಪ್ರಜ್ಞೆ ತಪ್ಪಿಸಿ ಈ ಕೃತ್ಯ ಎಸಗಿದ್ದರು. ಕಳೆದ ಮಂಗಳವಾರ ಶಿವಸಾಗರ್ ಜಿಲ್ಲೆಯ ಸಿಮಲ್‍ಗುರಿ ರೈಲು ನಿಲ್ದಾಣದ ರೈಲೊಂದರ ಶೌಚಾಲಯದಲ್ಲಿ 21 ವರ್ಷದ ಯುವತಿ ಶವ ಪತ್ತೆಯಾಗಿತ್ತು. ಈಕೆ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಎಂಬುದು ತಿಳಿದುಬಂದಿತು; ಮರುದಿನ ಬುಧವಾರ ಜೋಹರ್ ಜಿಲ್ಲೆಯ ಮಾರಿಯಾನಿ ನಿಲ್ದಾಣದ ಅವಧ್-ಅಸ್ಸಾಂ ಎಕ್ಸ್‍ಪ್ರೆಸ್ ರೈಲಿನಲ್ಲಿ ಮತ್ತೊಬ್ಬ ಮಹಿಳೆಯ ಮೃತದೇಹ ಕಂಡುಬಂತು.

ಈ ಇಬ್ಬರ ಮೇಲೆ ಅತ್ಯಾಚಾರ ಎಸಗಿ ನಂತರ ಕೊಂದಿರುವುದು ದೃಢಪಟ್ಟಿತು. ರೈಲ್ವೆ ಪೊಲೀಸರ ನೆರವಿನೊಂದಿಗೆ ತನಿಖೆ ತೀವ್ರಗೊಳಿಸಿದ ಅಸ್ಸಾಂ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಚಿರಿಂಗ್ ಚಪೋರಿ ಪ್ರದೇಶದಲ್ಲಿ ಬಿಕಾಶ್ ದಾಸ್‍ನನ್ನು ಮೊದಲು ಬಂಧಿಸಿದರು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಅತ್ಯಾಚಾರ ಮತ್ತು ಕೊಲೆ ನಡೆಸಿದ್ದಾಗಿ ಒಪ್ಪಿಕೊಂಡನಲ್ಲದೇ, ತನ್ನ ಸಹಚರ ಬಿಪಿನ್ ಪಾಂಡೆ ಕೂಡ ಇದೇ ರೀತಿಯ ಅಪರಾಧ ಎಸಗಿರುವ ಮಾಹಿತಿ ನೀಡಿದ. ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು ದಿಬ್ರುಗಢ್ ರೈಲು ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳು ಸಜ್ಜಾಗಿದ್ದ ರೈಲಿನಿಂದ ಪಾಂಡೆಯನ್ನು ಸೆರೆಹಿಡಿದರು.

Facebook Comments

Sri Raghav

Admin