ಸೆಪ್ಟಂಬರ್ ನಲ್ಲಿ ಭಾರತ-ಅಮೆರಿಕ 2+2 ಸಂವಾದ

ಈ ಸುದ್ದಿಯನ್ನು ಶೇರ್ ಮಾಡಿ

Nirmala-Seetaraman--01
ನವದೆಹಲಿ, ಜು.14-ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿರುವ ಭಾರತ ಮತ್ತು ಅಮೆರಿಕ ನಡುವಣ ಬಹು ನಿರೀಕ್ಷಿತ 2+2 ಮಾತುಕತೆ ಸೆಪ್ಟಂಬರ್‍ನಲ್ಲಿ ನಡೆಯಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಸೆಪ್ಟಂಬರ್ ಮೊದಲ ವಾರ ಅಮೆರಿಕ ಜೊತೆ 2+2 ಸಂವಾದ ನಡೆಯಲಿದೆ. ದ್ವಿಪಕ್ಷೀಯ ಸಂಬಂಧ ವೃದ್ಧಿ ಮತ್ತು ರಕ್ಷಣಾ ಸಹಕಾರ ಬಲಗೊಳಿಸುವುದು ಈ ಮಾತುಕತೆಯ ಮುಖ್ಯ ಕಾರ್ಯಸೂಚಿ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ಕಳೆದ ಜುಲೈ 6ರಂದು ಈ ಸಂವಾದಕ್ಕೆ ದಿನಾಂಕ ನಿಗದಿಯಾಗಿತ್ತು. ಈ ಮಾತುಕತೆಯಲ್ಲಿ ಭಾರತ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ನಿರ್ಮಲಾ ಸೀತಾರಾಮನ್ ಹಾಗೂ ಅಮೆರಿಕದ ಪರವಾಗಿ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಆರ್ ಪಾಂಪಿಯೋ ಮತ್ತು ರಕ್ಷಣಾ ಕಾರ್ಯದರ್ಶಿ ಜೇಮ್ ಮ್ಯಾಟಿಸ್ ಭಾಗವಹಿಸಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಸಭೆ ಮುಂದೂಡಲ್ಪಟ್ಟಿತು. ಅದಕ್ಕೂ ಹಿಂದೆ ಏಪ್ರಿಲ್‍ನಲ್ಲಿ ಇದೇ ರೀತಿ ನಿಗದಿಯಾಗಿದ್ದ ಸಭೆ ಕೂಡ ಮುಂದೂಡಲ್ಪಟ್ಟಿತ್ತು.

2+2 ಸಭೆ ಮಹತ್ವ :
ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ಬಲವರ್ಧನೆಯ ಹೊಸ ಮಾದರಿಯ ಸಂವಾದ ಇದಾಗಿದೆ. ಭಾರತ ಮತ್ತು ಅಮೆರಿಕದ ವಿದೇಶಾಂಗ ಸಚಿವರು ಹಾಗೂ ರಕ್ಷಣಾ ಸಚಿವರು ಜಂಟಿಯಾಗಿ ಮಾತುಕತೆ ನಡೆಸುತ್ತಾರೆ. ಭದ್ರತೆ, ಸೇನಾ ಸಹಕಾರ, ಹಾಗೂ ವಾಣಿಜ್ಯ-ವ್ಯಾಪಾರ ವೃದ್ಧಿ ಚರ್ಚೆಗೆ ಮುಖ್ಯ ವಿಷಯಗಳಾಗಿರುತ್ತವೆ.

Facebook Comments

Sri Raghav

Admin