ಕಾರ್ಯಕರ್ತರು-ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ 50ಕ್ಕೂ ಹೆಚ್ಚು ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Lahor

ಲಾಹೋರ್, ಜು.14-ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಪುತ್ರಿ ಮಾರಿಯಮ್ ನವಾಜ್ ಲಾಹೋರ್‍ಗೆ ಆಗಮನದ ವೇಳೆ ನಡೆದ ರ್ಯಾಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಪಾಕ್‍ನ ಪಂಜಾಬ್ ಪ್ರಾಂತ್ಯದಲ್ಲಿ ಪಿಎಂಎಲ್-ಎನ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಲಂಡನ್‍ನ ಇವೆನ್‍ಫೀಲ್ಡ್ ಅಕ್ರಮ ಆಸ್ತಿ ಪ್ರಕರಣದ ಸಂಬಂಧ ನಿನ್ನೆ ಲಾಹೋರ್‍ಗೆ ಆಗಮಿಸಿದ ನವಾನ್ ಮತ್ತು ಮರಿಯಮ್ ಅವರನ್ನು ಪಾಕಿಸ್ತಾನದ ಭಷ್ಟಾಚಾರ ನಿಗ್ರಹ ಸಂಸ್ಥೆ ನ್ಯಾಷನಲ್ ಅಕೌಂಟಬಿಲಿಟಿ ಬ್ಯೂರೋ ಬಂಧಿಸಿ, ರಾವಲ್ಪಿಂಡಿಯ ಸಹಲಾ ರೆಸ್ಟ್ ಹೌಸ್ ಜೈಲಿಗೆ ಸ್ಥಳಾಂತರಿಸಿತು.   ತಂದೆ ಮತ್ತು ಪುತ್ರಿ ಆಗಮನದ ವೇಳೆ ಲಾಹೋರ್ ಮತ್ತು ಪಂಜಾಬ್ ಪ್ರಾಂತ್ಯದ ಪಿಎಂಎಲ್-ಎನ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. 20 ಪೊಲೀಸರೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಸಂಬಂಧ ಹಲವಾರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin