ಅಪಘಾತ ತಪ್ಪಿಸಲು ಹೋಗಿ ಮತ್ತೊಂದು ಅವಘಡ ಮಾಡಿದ ಬಿಎಂಟಿಸಿ, ಕಾರು ಚಾಲಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

bmtc-car-acci

ಬೆಂಗಳೂರು, ಜು.14-ಅಪಘಾತ ತಪ್ಪಿಸಲು ಬಿಎಂಟಿಸಿ ಚಾಲಕ ಯತ್ನಿಸಿದರಾದರೂ ವಿಫಲವಾಗಿ ಕಾರಿಗೆ ಡಿಕ್ಕಿ ಹೊಡೆದು ಮರಕ್ಕೆ ಅಪ್ಪಳಿಸಿದ ಪರಿಣಾಮ ಕಾರು ಚಾಲಕ ಮೃತಪಟ್ಟಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಸರಘಟ್ಟ ಸಮೀಪದ ಸೋಮಶೆಟ್ಟಿ ಹಳ್ಳಿ ನಿವಾಸಿ ಜಗದೀಶ್ (25) ಮೃತಪಟ್ಟ ಕಾರು ಚಾಲಕ. ಇಂದು ಬೆಳಗ್ಗೆ 11.35ರಲ್ಲಿ 9ನೇ ಡಿಪೋಗೆ ಸೇರಿದ 253ಜಿ ಬಿಎಂಟಿಸಿ ಬಸ್ ಬೆಂಗಳೂರಿನಿಂದ ಹೆಸರಘಟ್ಟ ಮಾರ್ಗವಾಗಿ ಹೋಗುತ್ತಿತ್ತು. ಈ ವೇಳೆ ಹೆಸರಘಟ್ಟದಿಂದ ಬೆಂಗಳೂರು ಕಡೆಗೆ ಇಂಡಿಕಾ ಕಾರು ಬರುತ್ತಿದ್ದಾಗ ಜಾಲಹಳ್ಳಿ ವ್ಯಾಪ್ತಿಯ ಹುರುಳಿ ಚಿಕ್ಕನಹಳ್ಳಿ ಸಮೀಪದ ಸುಗ್ಗಿ ಡಾಬಾ ಬಳಿ ಕಾರಿಗೆ ಹೊಡೆಯುವುದನ್ನು ತಪ್ಪಿಸಲು ಬಿಎಂಟಿಸಿ ಬಸ್ ಚಾಲಕ ಯತ್ನಿಸಿದರಾದರೂ ವಿಫಲವಾಗಿ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದು ನಂತರ ಮರಕ್ಕೆ ಅಪ್ಪಳಿಸಿ ನಿಂತಿದೆ. ಪರಿಣಾಮವಾಗಿ ಕಾರು ಚಾಲಕ ಗಂಭೀರ ಗಾಯಗೊಂಡಿದ್ದನು. ತಕ್ಷಣ ಈತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮರಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‍ನಲ್ಲಿದ್ದ ಕೆಲವು ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡಿದ್ದು, ಇವರಿಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಜಾಲಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin