ಮಾತೃಪಕ್ಷ ಕಾಂಗ್ರೆಸ್‍ಗೆ ಮರಳಿದ ಆಂಧ್ರ ಮಾಜಿ ಸಿಎಂ ಕಿರಣ್‍ಕುಮಾರ್ ರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Kiran-Kumar-Reddy
ನವದೆಹಲಿ, ಜು.14-ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಇಂದು ಮತ್ತೆ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ನಾಲ್ಕು ವರ್ಷಗಳ ಬಳಿಕ ರೆಡ್ಡಿ ಮಾತೃಪಕ್ಷಕ್ಕೆ ಮರಳಿದ್ದಾರೆ. ಮಾಜಿ ಮುಖ್ಯಮಂತ್ರಿ ರೆಡ್ಡಿ ನೆನ್ನೆ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿ ಮಾಡಿದ ನಂತರ ಪಕ್ಷಕ್ಕೆ ಮರು ಸೇರ್ಪಡೆಯಾದರು ಎಂದು ಹಿರಿಯ ನಾಯಕ ರಣದೀಪ್ ಸುರ್ಜೆವಾಲಾ ತಿಳಿಸಿದರು. ಎಐಸಿಸಿ ಆಂಧ್ರಪ್ರದೇಶ ಉಸ್ತುವಾರಿ ಓಮೆನ್ ಚಾಂಡಿ, ಸುರ್ಜೆವಾಲ ಮತ್ತು ಎಪಿಸಿಸಿ ಮುಖ್ಯಸ್ಥ ಎನ್.ರಘುವೀರ ರೆಡ್ಡಿ ಅವರ ಸಮ್ಮುಖದಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ಅವರು ಕೈ ಪಕ್ಷ ಸೇರಿದರು.

Facebook Comments

Sri Raghav

Admin