ಕಾರು ತಡವಾಗಿ ಬಂದಿದ್ದಕ್ಕೆ ಚಾಲಕನ ಮೇಲೆ ಸಂಘಟನೆಯ ಜಿಲ್ಲಾಧ್ಯಕ್ಷನಿಂದ ಫೈರಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

mysur-jk-fireing
ಮೈಸೂರು, ಜು.14- ತಮ್ಮನ್ನು ಪಿಕಪ್ ಮಾಡಲು ಕಾರು ತಡವಾಗಿ ಬಂದಿದ್ದಕ್ಕೆ ಚಾಲಕನೊಂದಿಗೆ ಜಗಳವಾಡಿದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ನಾಲ್ಕು ಸುತ್ತು ಗುಂಡು ಹಾರಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ಆತಂಕ ಉಂಟುಮಾಡಿದೆ. ಭಾರತ್ ಇಂಟರ್‍ನ್ಯಾಷನಲ್ ಟ್ರಾವೆಲ್ಸ್‍ನ ಕಾರನ್ನು ಜಿಲ್ಲಾಧ್ಯಕ್ಷ ಸತೀಶ್‍ಗೌಡ ಎಂಬುವವರು ರಾತ್ರಿ ಬುಕ್ಕಿಂಗ್ ಮಾಡಿದ್ದರು.  ಈ ವೇಳೆ ಚಾಲಕ ರಘು ಸ್ವಲ್ಪ ತಡವಾಗಿ ಬಂದಿದ್ದಾರೆ. ಇದರಿಂದ ಕೋಪಗೊಂಡ ಸತೀಶ್‍ಗೌಡ ಚಾಲಕನ ಜತೆ ಜಗಳವಾಡಿ ತಮ್ಮ ಬಳಿ ಇದ್ದ ರಿವಾಲ್ವರ್‍ನಿಂದ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ರಘು ಮೇಲೆ ಗುಂಡು ಹಾರಿಸಿದ್ದು, ಅದೃಷ್ಟವಶಾತ್ ಅವರು ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ನಂತರ ರಘು ವಿಜಯನಗರ ಠಾಣೆಗೆ ತೆರಳಿ ನಡೆದ ವಿಷಯ ತಿಳಿಸಿ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸತೀಶ್‍ಗೌಡನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಈ ಘಟನೆ ನಡೆದಿರುವುದರಿಂದ ನಾಗರಿಕರು ಆತಂಕ ಗೊಂಡಿದ್ದಾರೆ. ಸಂಘಟನೆಯ ಸದಸ್ಯರಾಗಿ ರುವವರು ಜವಾಬ್ದಾರಿಯಿಂದ ವರ್ತಿಸಬೇಕೆಂಬುದು ಜನಾಭಿಪ್ರಾಯವಾಗಿದೆ.

Facebook Comments

Sri Raghav

Admin