ಅಮರನಾಥ ಯಾತ್ರೆಗೆ ಹೊರಟೆ 3,000 ಭಕ್ತರ ಹೊಸ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

Amarnath--01

ಜಮ್ಮು, ಜು.14-ದಕ್ಷಿಣ ಕಾಶ್ಮೀರದ ಹಿಮಾಲಯ ಪರ್ವತಸ್ತೋಮದಲ್ಲಿರುವ ವಿಶ್ವವಿಖ್ಯಾತ ಅಮರನಾಥ ಗುಹಾಂತರ ದೇವಾಲಯಕ್ಕೆ 3,000 ಯಾತ್ರಿಕರ ಹೊಸ ತಂಡ ಇಂದು ಬೆಳಗ್ಗೆ ಜಮ್ಮುವಿನಿಂದ ಪಯಣ ಆರಂಭಿಸಿತು. ಜೂನ್ 28ರಿಂದ ಗುಂದೇರ್‍ಬಲ್‍ನ ಬಾಲ್‍ತಾಲ್ ಮತ್ತು ಅನಂತನಾಗ್ ಜಿಲ್ಲೆಯ ಪಹಲ್‍ಗಂ ಈ ಎರಡು ಮಾರ್ಗದಿಂದ 60 ದಿನಗಳ ಅಮರನಾಥ ಯಾತ್ರೆ ಆರಂಭಗೊಂಡಿದ್ದು, ನಿನ್ನೆವರೆಗೆ ದೇಶದ ವಿವಿಧ ರಾಜ್ಯಗಳಿಂದ 1.65 ಲಕ್ಷ ಯಾತ್ರಾರ್ಥಿಗಳು ಪವಿತ್ರ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ.

ಇಂದು ಮುಂಜಾನೆಯಿಂದ ಪಯಣ ಆರಂಭಿಸಿದ 3,048 ಯಾತ್ರಿಕರ ತಂಡದಲ್ಲಿ 623 ಮಹಿಳೆಯರು ಮತ್ತು 144 ಸಾಧು-ಸಂತರು ಇದ್ದಾರೆ. ವ್ಯಾಪಕ ಭದ್ರತೆ ನಡುವೆ ಕಣಿವೆಯ ಮೂಲ ಶಿಬಿರಗಳಿಂದ 112 ವಾಹನಗಳಲ್ಲಿ ಇವರು ತೆರಳಿದರು.

Facebook Comments

Sri Raghav

Admin