ದೆಹಲಿಯಿಂದ ಸೌದಿಗೆ ಪಯಣ ಬೆಳೆಸಿದ ಹಜ್ ಯಾತ್ರಿಕರ ಮೊದಲ ತಂಡ

ಈ ಸುದ್ದಿಯನ್ನು ಶೇರ್ ಮಾಡಿ

Hujj--01
ನವದೆಹಲಿ, ಜು.14-ಮುಸ್ಲಿಂ ಬಾಂಧವರ ಪವಿತ್ರ ಹಜ್ ಯಾತ್ರೆ ಪ್ರಕ್ರಿಯೆ ಪ್ರಾರಂಭವಾಗಿದೆ. ಸೌದಿ ಅರೇಬಿಯಾದತ್ತ ಪ್ರಯಾಣ ಬೆಳೆಸಿದ ಹಜ್ ಯಾತ್ರಿಕರ ಮೊದಲ ತಂಡಕ್ಕೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಇಂದು ರಾಜಧಾನಿ ದೆಹಲಿಯಲ್ಲಿ ಹಸಿರು ನಿಶಾನೆ ತೋರಿದರು.  ಇಂದು ಬೆಳಗ್ಗೆ ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣನಿಂದ ಮದೀನಾಕ್ಕೆ ತೆರಳಿದ 410 ಹಜ್ ಯಾತ್ರಾರ್ಥಿಗಳಿಗೆ ಸಚಿವರು ಶುಭ ಕೋರಿದರು. ಈ ವರ್ಷ ಹಜ್ ಸಮಿತಿ ಮೂಲಕ ಭಾರತದ ವಿವಿಧ ರಾಜ್ಯಗಳಿಂದ ಒಟ್ಟು 1,28,702 ಯಾತ್ರಿಕರು ಹಜ್ ಯಾತ್ರೆ ಕೈಗೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿದೆ.

ಇಂದು ಮೂರು ವಿಮಾನಗಳಲ್ಲಿ 1,200ಕ್ಕೂ ಹೆಚ್ಚು ಯಾತ್ರಿಕರು ಮೂರು ಹಂತಗಳಲ್ಲಿ ದೆಹಲಿಯಿಂದ ಸೌದಿಗೆ ಪ್ರಯಾಣ ಬೆಳೆಸಿದರು. ದೆಹಲಿ ಅಲ್ಲದೇ ಗಯಾದಿಂದ 450, ಗುವಾಹತಿಯಿಂದ 269, ಲಕ್ನೋದಿಂದ 900 ಹಾಗೂ ಶ್ರೀನಗರದಿಂದ 1,020 ಮಂದಿ ಸೌದಿಗೆ ತೆರಳಿದರು.

Facebook Comments

Sri Raghav

Admin