ಹೈಕೋರ್ಟ್‍ಗಳಿಗೆ 69 ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು

ಈ ಸುದ್ದಿಯನ್ನು ಶೇರ್ ಮಾಡಿ

Judges--01
ನವದೆಹಲಿ, ಜು.14-ದೇಶದ ವಿವಿಧ ಹೈಕೋರ್ಟ್‍ಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಕಾನೂನು ಸಚಿವಾಲಯ 69 ನ್ಯಾಯಮೂರ್ತಿಗಳ ಹೆಸರುಗಳನ್ನು ಸುಪ್ರೀಂಕೋರ್ಟ್‍ಗೆ ಶಿಫಾರಸು ಮಾಡಿದೆ. ಇದರೊಂದಿಗೆ ಜಡ್ಜ್‍ಗಳ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆತಂತಾಗಿದೆ.
ನಿಯಮದ ಪ್ರಕಾರ ಹೈಕೋರ್ಟ್ ಹಿರಿಯ ನ್ಯಾಯಾಧೀಶರ ಮಂಡಳಿ(ಕೊಲ್ಜಿಯಂ) ಅಂತಿಮವಾಗಿ ಆಯ್ಕೆ ಮಾಡಿದ ನ್ಯಾಯಮೂರ್ತಿಗಳ ಹೆಸರನ್ನು ಪರಿಶೀಲನೆಗಾಗಿ ಕಳುಹಿಸಿ ಕೊಡಬೇಕು. ಈ ಪಟ್ಟಿಯನ್ನು ಕಾನೂನು ಸಚಿವಾಲಯ ಸುಪ್ರೀಂಕೋರ್ಟ್‍ಗೆ ರವಾನಿಸುತ್ತದೆ.

ಸರ್ವೋಚ್ಚ ನ್ಯಾಯಾಲಯದ ಕೊಲೀಜಿಯಂಗೆ ಹೆಸರುಗಳ ಪಟ್ಟಿ ಕಳುಹಿಸಿಕೊಡುವುದಕ್ಕೆ ಮುನ್ನ ಕಾನೂನು ಸಚಿವಾಲಯವು ವರದಿಯೊಂದನ್ನು ಲಗತ್ತಿಸುತ್ತದೆ. ಈ ಸಂಬಂಧ ದೇಶದ 23 ಹೈಕೋರ್ಟ್‍ಗಳ ಕೊಲೀಜಿಯಂ 69 ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡಿದೆ.  ಈ ಶಿಫಾರಸು ವರದಿ ಸುಪ್ರೀಂಕೋರ್ಟ್‍ಗೆ ತಲುಪಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಹೈಕೋರ್ಟ್ ಕೊಲೀಜಿಯಂ ಶಿಫಾರಸು ಮಾಡಿದ ಹೆಸರುಗಳಲ್ಲಿ ಸುಪ್ರೀಂಕೋರ್ಟ್ ಶೇ.40ರಷ್ಟನ್ನು ತಿರಸ್ಕರಿಸುವ ಸಾಧ್ಯತೆ ಇದೆ.  ಈ ವರ್ಷ ಇಲ್ಲಿಯ ತನಕ 24 ಹೈಕೋರ್ಟ್‍ಗಳಿಗೆ ಒಟ್ಟು 34 ಜಡ್ಜ್‍ಗಳು ನೇಮಕವಾಗಿದ್ದರು. 2016ರಲ್ಲಿ ಹೈಕೋರ್ಟ್‍ಗಳಿಗೆ 34 ನ್ಯಾಯಾಧೀಶರನ್ನು ನೇಮಕ ಮಾಡಲಾಗಿತ್ತು. ಸ್ವಾತಂತ್ರ್ಯದ ನಂತರ ಅತಿ ಹೆಚ್ಚು ಸಂಖ್ಯೆಯಲ್ಲಿ ಮಾಡಿದ ನೇಮಕ ಇದಾಗಿತ್ತು.

Facebook Comments

Sri Raghav

Admin