ಬದುಕಿರುವ ವ್ಯಕ್ತಿಯ ಜಮೀನು ಕಬಳಿಸಲು ಯತ್ನ ಖಂಡಿಸಿ ವಿಷದ ಬಾಟಲಿ ಹಿಡಿದು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ನಾಗಮಂಗಲ, ಜು.14- ಬದುಕಿರುವ ವ್ಯಕ್ತಿಯ ಹೆಸರಿನಲ್ಲಿರುವ ಗಂಗಸಮುದ್ರದ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮ ಪೌತಿ ಖಾತೆ ಮಾಡಿರುವ ಪ್ರಕರಣದಲ್ಲಿ ಗ್ರಾಮ ಲೆಕ್ಕಾಧಿಕಾರಿ ಬಿಟಿ ರಾಮು ವಿರುದ್ದ ಕಠಿಣ ಕ್ರಮಜರುಗಿಸಬೇಕು ಮತ್ತು ನಮ್ಮ ಹೆಸರಿಗೆ ಮರುಖಾತೆ ಮಾಡುವಂತೆ ಒತ್ತಾಯಿಸಿ ವಿಷದ ಬಾಟಲಿಯೊಂದಿಗೆ ರೈತಕುಟುಂಬ ಪಟ್ಟಣದಲ್ಲಿ ಪ್ರತಿಭಟನೆ ಮಾಡಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ಕರ್ನಾಟಕ ರಾಜ್ಯ ರೈತ ಸಂಘದ ನೆರವಿನೊಂದಿಗೆ ಪಟ್ಟಣ ಮಿನಿ ವಿಧಾನಸೌದದ ಮುಂದೆ ಸಂತ್ರಸ್ಥ ರೈತ ಯಾಲಕ್ಕಿಗೌಡ ಮತ್ತು ಕುಟುಂಬ ಪ್ರತಿಭಟನೆ ನಡೆಸಿತು. ಕಾಂತಾಪುರ ಗ್ರಾಪಂ ವ್ಯಾಪ್ತಿಯ ಗಂಗಸಮುದ್ರದ ರೈತ ಯಾಲಕ್ಕಿಗೌಡ ಅವರ ಸ.ನಂ.53/2ರಲ್ಲಿರುವ ಎರಡುವರೆ ಎಕರೆ ಜಮೀನನ್ನು ಗ್ರಾಮಲೆಕ್ಕಿಗ ಬಿಟಿ ರಾಮು ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಸಿ ಜಮೀನು ಲಪಟಾಯಿಸಿದ್ದಾನೆ. ಇದಕ್ಕಾಗಿ ನಮ್ಮ ತಂದೆ ಬದುಕಿರುವಾಗಲೇ ಯಾಲಕ್ಕಿಗೌಡ ಎಂಬ ಹೆಸರಿನಲ್ಲಿ ಸುಳ್ಳು ಮರಣ ದೃಡೀಕರಣ ಪತ್ರ ಸೃಷ್ಟಿಮಾಡಿದ್ದಾರೆ,ಭದ್ರಾವತಿಯಲ್ಲಿ ವಾಸವಿರುವ ಮೋಹನ ಬಿನ್ ಯಾಲಕ್ಕಿಗೌಡ ಎಂಬ ಹೆಸರಿಗೆ ಇದೇ ವರ್ಷ ಏ.28 ರಂದು ಅಕ್ರಮ ಖಾತೆ ಮಾಡಿಕೊಡಲಾಗಿದೆ.

ಇದನ್ನ ಪ್ರಶ್ನೆ ಮಾಡಿದ ನಮ್ಮ ಮತ್ತು ಕುಟುಂಬಸ್ಥರಿಗೆ ಧಮಕಿ ಹಾಕಿದ್ದಾನೆ ಎಂದು ಯಾಲಕ್ಕಿಗೌಡರ ಮಗ ಅಶೋಕ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ನಾವು ದೂರು ನೀಡಿದ್ದರು ಯಾವುದೇ ಕ್ರಮಕೈಗೊಂಡಿಲ್ಲ. ನಮ್ಮ ಕುಟುಂಬಕ್ಕೆ ಆಸರೆಯಾಗಿರುವ ಜಮೀನಿ ನಮ್ಮ ಹೆಸರಿಗೆ ಖಾತೆಯಾಗದಿದ್ದರೆ ನಾವು ಬದುಕಿರುವುದಿಲ್ಲ ಎಂದು ಗ್ರಾಮಲೆಕ್ಕಿಗ ಮತ್ತು ಆರ್‍ಐ ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಮ್ಮಗೆ ನ್ಯಾಯ ಸಿಗದಿದ್ದರೆ ವಿಷ ಕುಡಿದು ಸಾಯುತ್ತೇನೆ ಇದೊಂದೆ ನಮಗಿರುವ ದಾರಿ ಎಂದರು.

ಕುಟುಂಬದ ಬೆಂಬಲಕ್ಕೆ ನಿಂತ ರೈತ ಸಂಘ:
ಸಂತ್ರಸ್ಥ ಯಾಲಕ್ಕಿಗೌಡರ ಕುಟುಂಬದ ನೆರವಿಗೆ ನಿಂತ ರಾಜ್ಯ ರೈತಸಂಘದ ಕಾರ್ಯಕರ್ತರು ಈ ಪ್ರಕರಣದಲ್ಲಿ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ನಾವು ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಮಿನಿ ವಿಧಾನಸೌದದ ಬಾಗಿಲು ಮುಚ್ಚಿ ಪ್ರತಿಭಟಿಸಿದರು.

ವಿಎ ಅಮಾನತ್ತಿಗೆ ಕ್ರಮ: ತಹಶೀಲ್ದಾರ್ ಭರವಸೆ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ನಂಜುಂಡಯ್ಯ ಪ್ರಕರಣದ ಮಾಹಿತಿ ಪಡೆದು ಅಕ್ರಮ ಖಾತೆ ಮಾಡಿದ್ದರೆ ದಾಖಲೆ ಪರಿಶೀಲನೆ ಮಾಡಿ ಗ್ರಾಮ ಲೆಕ್ಕಿಗ ಬಿಟಿ ರಾಮು ವಿರುದ್ದ ಅಮಾನತ್ತಿನ ಕ್ರಮ ಕೈಗೊಳ್ಳುತ್ತೇವೆ  ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಮುಖಂಡ ಕೀಳಘಟ್ಟ ನಂಜುಂಡಯ್ಯ, ತಾಲ್ಲೂಕು ಗೌರವಾದ್ಯಕ್ಷ ರಂಗೇಗೌಡ, ತಾಲ್ಲೂಕು ಅಧ್ಯಕ್ಷ ಶಾಂತಣ್ಣ, ಹರಳಕೆರೆ ಗೋಪಾಲಕೃಷ್ಣ, ಶಿವನಂಜೇಗೌಡ, ಶಿರಾಜೇಗೌಡ, ಶಿವರಾಜು, ಮತ್ತು ಸಂತ್ರಸ್ಥ ಕುಟುಂಬ ಸದಸ್ಯರಿದ್ದರು.

Facebook Comments

Sri Raghav

Admin