ಪ್ರೇಕ್ಷಕರಿಗೆ ಥ್ರಿಲ್ ನೀಡಿದ ರಹಸ್ಯ ಸಮರಾ ಬಾಹ್ಯಾಕಾಶ ಕಥೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Ds-1
ಹಳೆ ಸಂಗತಿಗಳಿಗೆ ಮರು ಜೀವ ಬಂದರೆ ಅದೊಂದು ಅಚ್ಚರಿಯ ವಿದ್ಯಮಾನ ಅಲ್ಲವೇ? ಈ ಹಿಂದೆ ಸೋವಿಯತ್ ಒಕ್ಕೂಟದ ಬಾಹ್ಯಾಕಾಶ ಕಾರ್ಯಕ್ರಮದ ರಹಸ್ಯ ತಾಣವಾಗಿದ್ದ ಸಮರಾ ಈಗ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಕ್ರೀಡಾಂಗಣ ಸ್ಥಳವೂ ಆಗಿದೆ. ಅಲ್ಲಿನ ಅಂತರಿಕ್ಷ ಕಥೆಗಳು ಈಗ ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತಿವೆ.  ಸಮರಾ-ಇದು 1991ರವರೆಗೆ ಕೇಬಿಶೇವ್ ಎಂದೇ ಕರೆಯಲ್ಪಡುತ್ತಿತ್ತು. ಹಿಂದಿನ ಸೋವಿಯತ್ ಒಕ್ಕೂಟದ ರಹಸ್ಯ ಬಾಹ್ಯಾಕಾಶ ಕಾರ್ಯಕ್ರಮಗಳ ನೆಲೆ ಇದಾಗಿತ್ತು. 1961ರಲ್ಲಿ ಅಂತರಿಕ್ಷಕ್ಕೆ ಮೊಟ್ಟ ಮೊದಲ ಬಾರಿಗೆ ಯಾನ ಮಾಡಿದ ಯೂರಿ ಗಗಾರಿನ್ ಅವರನ್ನು ಹೊತ್ತೊಯ್ದ ರಾಕೆಟ್ ಕೂಡ ನಿರ್ಮಾಣವಾಗಿದ್ದು ಇಲ್ಲೆ. ಆಗ ಈ ನಗರವು ಹೊರ ಪ್ರಪಂಚಕ್ಕೆ ಬಂದ್ ಆಗುತ್ತಿತ್ತು. ಕೆಲವೇ ಕೆಲವು ವಿದೇಶಿಯರು ಮತ್ತು ಸಾಂಸ್ಕøತಿಕ ರಾಯಭಾರಿ ಮಾತ್ರವೇ ಇಲ್ಲಿ ವಾಸವಾಗಿದ್ದರು. ಇಲ್ಲಿ ಏನು ನಡೆಯುತ್ತದೆ. ಇಲ್ಲಿ ಏನು ಮಾಡುತ್ತಾರೆ ಎಂಬುದು ಹೊರಗಿನವರಿಗೆ ಗೊತ್ತಾಗುತ್ತಿರಲಿಲ್ಲ. ಇದು ಸಾರ್ವಜನಿಕರಿಗೆ ಸಂಪೂರ್ಣ ನಿಷಿದ್ಧ ಸ್ಥಳವಾಗಿತ್ತು.

Ds-2

ಈ ನಗರದ ಮೂಲಕ ಹಾದು ಹೋಗುತ್ತಿದ್ದ ವೋಲ್ಗಾ ನದಿಯಲ್ಲಿ ದೋಣಿಗಳಿಗೆ ರಾತ್ರಿ ವೇಳೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತಿತ್ತು. ನಗರದ ಚಟುವಟಿಕೆಗಳು ಗೊತ್ತಾಗಬಾರದು ಎಂಬುದು ಇದರ ಉದ್ದೇಶವಾಗಿತ್ತು.  ಸಮರಾದಲ್ಲಿನ ಪ್ರತಿ ಕುಟಂಬಗಳು ಒಂದಲ್ಲ ಒಂದು ರೀತಿಯಲ್ಲಿ ರಾಕೆಟ್ ತಯಾರಿಕಾ ಉದ್ಯಮದ ಪ್ರಕ್ರಿಯೆಯಲ್ಲಿ ತೊಡಗುತ್ತಿದ್ದರು ಎಂದು ವಿವರಿಸುತ್ತಾರೆ ಸಮರಾ ಬಾಹ್ಯಾಕಾಶ ವಸ್ತು ಸಂಗ್ರಹಾಲಯದ ನಿರ್ದೇಶಕರಾದ ಎಲೆನಾ ಕುಝಿನಾ.
ಈ ಹಿಂದೆ ಸೋವಿಯತ್ ಒಕ್ಕೂಟದ ಬಾಹ್ಯಾಕಾಶ ಕಾರ್ಯಕ್ರಮದ ರಹಸ್ಯ ತಾಣವಾಗಿದ್ದ ಸಮರಾ ಈಗ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಕ್ರೀಡಾಂಗಣ ಸ್ಥಳವೂ ಆಗಿದೆ. ಇಲ್ಲಿನ ಕ್ರೀಡಾಂಗಣವು ಹಾರುವ ತಟ್ಟೆಯಾಕಾರದಲ್ಲಿದೆ. ಇದು ಒಟ್ಟು ಆರು ಪಂದ್ಯಗಳಿಗೆ ಅಖಾಡವಾಗಿದ್ದು, ಸಹಸ್ರಾರು ಫುಟ್ಬಾಲ್ ಅಭಿಮಾನಿಗಳು ಈ ನಗರಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ ಕುಝಿನಾ ಅವರ ವಸ್ತು ಸಂಗ್ರಹಾಲಯಕ್ಕೆ ತೆರಳಿ ಈ ಹಿಂದಿನ ರಹಸ್ಯ ಬಾಹ್ಯಾಕಾಶ ಸಂಗತಿಗಳನ್ನು ಕಣ್ಣಾರೆ ಕಂಡು ಥ್ರಿಲ್ ಆಗುತ್ತಿದ್ದಾರೆ.  ರಷ್ಯಾದ ಗೊಂಬೆಗಳು, ವಿವಿಧ ಗಗನಯಾನ ಸಾಹಸಗಳು, ಯೂರಿ ಗಗಾರಿನ್ ಮತ್ತು ಚಂದ್ರನ ಮೇಲೆ ಮೊದಲು ಕಾಲಿಟ್ಟ ನೀಲ್ ಆರ್ಮ್‍ಸ್ಟ್ರಾಂಗ್ ಅವರ ಐತಿಹಾಸಿಕ ದಾಖಲೆಗಳ ಮೈಲಿಗಲ್ಲುಗಳ ಮಾಹಿತಿಗಳು ಇಲ್ಲಿ ಲಭ್ಯ.

Ds

Facebook Comments

Sri Raghav

Admin