ರಾಜ್ಯಸಭೆಗೆ ನಾಲ್ವರು ಗಣ್ಯರ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Rajya-sabha--01
ನವದೆಹಲಿ, ಜು.14-ಸಂಸತ್ತಿನ ಮೇಲ್ಮನೆಗೆ ಇಂದು ನಾಲ್ವರು ಗಣ್ಯರು ನೇಮಕಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಾಲ್ವರನ್ನು ರಾಜ್ಯಸಭೆಗೆ ನೇಮಕ ಮಾಡಿದ್ದಾರೆ. ಮಾಜಿ ಸಂಸದ ರಾಮ್ ಶಂಕಲ್, ಆರ್‍ಎಸ್‍ಎಸ್ ವಿಚಾರವಾದಿ ರಾಕೇಶ್ ಸಿನ್ಹಾ, ಶಾಸ್ತ್ರೀಯ ನೃತ್ಯಗಾರ್ತಿ ಸೋನಾಲ್ ಮಾನ್‍ಸಿಂಗ್ ಹಾಗೂ ಶಿಲ್ಪ ಕಲಾವಿದ ರಘುನಾಥ್ ಮಹಾಪಾತ್ರ ಅವರ ಇಂದು ರಾಜ್ಯಸಭೆಗೆ ನೇಮಕಗೊಂಡಿದ್ದಾರೆ ಎಂದು ಪ್ರಧಾನಮಂತ್ರಿಯವರ ಕಾರ್ಯಾಲಯ (ಪಿಎಂಒ) ತಿಳಿಸಿದೆ.

Facebook Comments

Sri Raghav

Admin