ಮುಂದಿನ ತಿಂಗಳಿನಲ್ಲಿ ತಿರುಪತಿಗೆ ಹೋಗುವ ಪ್ಲಾನ್ ಮಾಡಿದ್ದರೆ ಈ ಸುದ್ದಿಯನ್ನೊಮ್ಮೆ ಓದಿ

ಈ ಸುದ್ದಿಯನ್ನು ಶೇರ್ ಮಾಡಿ

Tirupati
ತಿರುಪತಿ, ಜು.14- ಹಿಂದೂಗಳ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಶ್ರೀಕ್ಷೇತ್ರ ತಿರುಪತಿಯಲ್ಲಿ ಮುಂದಿನ ತಿಂಗಳಿನಲ್ಲಿ 9 ದಿನಗಳ ಕಾಲ ದೇವರ ದರ್ಶನಕ್ಕೆ ಅವಕಾಶವಿಲ್ಲ. ಅಷ್ಟಬಂಧಬಾಲಾಲಯ ಮಹಾ ಸಂಪೋಕ್ಷಣಂ ಅಂಗವಾಗಿ 9 ದಿನಗಳ ಕಾಲ ವಿಶೇಷ ಪೂಜೆ ನಡೆಯುವುದರಿಂದ ಈ ವೇಳೆ ಸಾರ್ವಜನಿಕರ ತಿಮ್ಮಪ್ಪನ ದರ್ಶನ ಸಾಧ್ಯವಿಲ್ಲ.

ಶನಿವಾರ ಟಿಡಿಟಿ ನಡೆಸಿದ ಸಭೆಯಲ್ಲಿ ಮುಂದಿನ ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ಈ ಐತಿಹಾಸಿಕ ಆಚರಣೆ ವೇಳೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲು ತೀರ್ಮಾನಿಸಲಾಯಿತು. ಪ್ರತಿ 12 ವರ್ಷಕ್ಕೊಮ್ಮೆ ಅಷ್ಟಬಂಧಬಾಲಾಲಯ ಮಹಾ ಸಂಪೋಕ್ಷಣಂ ನಡೆಯುತ್ತಿರುವುದರಿಂದ ದೇಶದ ನಾನಾ ಭಾಗಗಳಿಂದ ತಿರುಪತಿಗೆ ಭಕ್ತಾದಿಗಳು ಬಾರದಿರುವುದು ಒಳಿತು ಎಂದು ಮನವಿ ಮಾಡಿದೆ.  ಆಗಸ್ಟ್ 11ರಂದು ಅಷ್ಟಬಂಧಬಾಲಾಲಯ ಮಹಾ ಸಂಪೋಕ್ಷಣಂಗೆ ಪೂಜಾ ಕಾರ್ಯಕ್ರಮ 16ರವರೆಗೆ ನಡೆಯಲಿದೆ. ಬಳಿಕ ಮೂರು ವಿಶೇಷಾ ಪೂಜಾ ಕಾರ್ಯಗಳು ನಡೆಯಲಿವೆ. ಈ ಸಮಯದಲ್ಲಿ ಕೇವಲ 30 ಸಾವಿರ ಭಕ್ತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

Facebook Comments

Sri Raghav

Admin