ಇಂದಿನ ಪಂಚಾಗ ಮತ್ತು ರಾಶಿಫಲ (14-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದಾನ ಮಾಡುವುದರಿಂದ ಗೌರವ ಬರುತ್ತದೆಯೋ ಹೊರತು ಹಣವನ್ನು ಸಂಗ್ರಹಿಸುವುದರಿಂದಲ್ಲ. ನೀರನ್ನು ಕೊಡುವ ಮೋಡ ಆಕಾಶವನ್ನೇರಿ ನಿಂತಿದೆ. ನೀರನ್ನು ಸಂಗ್ರಹಿಸುವ ಸಮುದ್ರ ಕೆಳಗಿದೆ.-ಮನುಸ್ಮೃತಿ

Rashi

ಪಂಚಾಂಗ : 14.07.2018, ಶನಿವಾರ
ಸೂರ್ಯ ಉದಯ ಬೆ.6.01 / ಸೂರ್ಯ ಅಸ್ತ ಸಂ.6.50
ಚಂದ್ರ ಉದಯ ಬೆ.7.04 / ಚಂದ್ರ ಅಸ್ತ ರಾ.8.10
ವಿಲಂಬಿ ಸಂವತ್ಸರ / ದಕ್ಷಿಣಾಯಣ, ಗ್ರೀಷ್ಮ ಋತು / ಆಷಾಢ ಮಾಸ
ಶುಕ್ಲಪಕ್ಷ / ತಿಥಿ : ದ್ವಿತೀಯಾ (ರಾ.12.55)
ನಕ್ಷತ್ರ: ಪುಷ್ಯ (ಸಾ.4.07) / ಯೋಗ: ವಜ್ರ (ರಾ.12.21)
ಕರಣ: ಬಾಲವ-ಕೌಲವ (ಮ.2.42-ರಾ.12.55)
ಮಳೆ ನಕ್ಷತ್ರ: ಪುನರ್ವಸು / ಮಾಸ: ಮಿಥುನ / ತೇದಿ: 30

ರಾಶಿ ಭವಿಷ್ಯ :
ಮೇಷ: ವ್ಯಾಪಾರದಲ್ಲಿ ಅಧಿಕ ಲಾಭವಿದೆ.
ವೃಷಭ: ಮಕ್ಕಳ ಪ್ರಗತಿಯಿಂದ ಸಂತೋಷ.
ಮಿಥುನ: ಕುಲದೇವತಾ ಅನುಗ್ರಹದಿಂದ ಅಂದುಕೊಂಡ ಕೆಲಸಗಳು ಸುಸೂತ್ರವಾಗಲಿವೆ.
ಕರ್ಕ: ಸಂಯಮದಿಂದ ವರ್ತಿಸಿದರೆ ದಿನ ಪೂರ್ತಿ ನೆಮ್ಮದಿ ಇದೆ
ಸಿಂಹ: ನಾನಾ ಮೂಲಗಳಿಂದ ಹಣದ ಹರಿವು
ಕನ್ಯಾ: ಸಂಶೋಧಕರಿಗೆ ಸರ್ಕಾರದಿಂದ ಮನ್ನಣೆ.
ತುಲಾ: ಅಂದುಕೊಂಡಂತೆ ಎಲ್ಲಾ ಕಾರ್ಯ ನಿಗದಿತ ವೇಳೆ ಮುಗಿಯಲಿದೆ.
ವೃಶ್ಚಿಕ: ಹೊಗಳಿಕೆಗೆ ಉಬ್ಬುವ ನಿಮ್ಮ ಜಾಯಮಾನವನ್ನು ಕೆಲವರು ಸಮರ್ಥವಾಗಿ ಬಳಸಿಕೊಳ್ಳಲಿದ್ದಾರೆ.
ಧನುರ್: ಸಾಹಸಮಯ ಕೆಲಸಕಾರ್ಯದಲ್ಲಿ ತೊಡಗಿ ಜನಪ್ರಿಯತೆ ಹೆಚ್ಚಲಿದೆ.
ಮಕರ: ಆದಾಯಕ್ಕೆ ತಕ್ಕಂತೆ ಖರ್ಚು ಮಾಡುವುದು ಒಳಿತು.
ಕುಂಭ: ಉತ್ಸಾಹಿಗಳಾದ ನಿಮ್ಮನ್ನು ಸುಲಭವಾಗಿ ದಾರಿ ತಪ್ಪಿಸುವ ಮಂದಿ ಎದುರಾಗಲಿದ್ದಾರೆ.
ಮೀನ: ಕುಟುಂಬದ ಸದಸ್ಯರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ಕರಗಿ ಒಮ್ಮತ-ಒಗ್ಗಟ್ಟು ಮೂಡುವುದು.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin