ವಾಚ್‍ಮ್ಯಾನ್ ಜೊತೆ ತಾನು ಸರಸವಾಡುತ್ತಿದ್ದನ್ನು ನೋಡಿದ ಬಾಲಕನನ್ನು ಕೊಂದ ವಿದ್ಯಾರ್ಥಿನಿ..!

ಈ ಸುದ್ದಿಯನ್ನು ಶೇರ್ ಮಾಡಿ

Girlk-Murder

ಪಾಟ್ನಾ, ಜು.15-ಬಿಹಾರದ ರಾಜಧಾನಿ ಪಾಟ್ನಾದ ಖಾಸಗಿ ಶಾಲೆಯ ವಸತಿ ಗೃಹವೊಂದರಲ್ಲಿ ಆರು ವರ್ಷದ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಎಂಟನೇ ತರಗತಿ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.  ಶೌಚಾಲಯದಲ್ಲಿ ವಿದ್ಯಾರ್ಥಿನಿ ವಾಚ್‍ಮ್ಯಾನ್ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದನ್ನು ಅದೇ ವಸತಿಗೃಹದ ಆರು ವರ್ಷದ ಬಾಲಕ ಅಭಿಮನ್ಯು ನೋಡಿದ್ದ. ಈ ವಿಷಯ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೆದರಿ ತಾನು ಬಾಲಕನ ಕತ್ತು ಹಿಸುಕಿ ಕೊಂದಿದ್ಧಾಗಿ ಬಂಧಿತ ವಿದ್ಯಾರ್ಥಿನಿ ಒಪ್ಪಿಕೊಂಡಿದ್ಧಾಳೆ.

ಜುಲೈ 9ರಂದು ಬೆಳಗ್ಗೆ ಅಭಿಮನ್ಯುವಿನ ಮೃತದೇಹ ಆತನ ಕೋಣೆಯಲ್ಲಿ ಪತ್ತೆಯಾಗಿತ್ತು. ಜುಲೈ 6ರಂದು ಕಾವಲುಗಾರ ವಿದ್ಯಾರ್ಥಿಯನ್ನು ಶೌಚಾಲಯಕ್ಕೆ ಕರೆದೊಯ್ದು ಸರಸ ಸಲ್ಲಾಪದಲ್ಲಿ ತೊಡಗಿದ್ದ. ಈ ದೃಶ್ಯವನ್ನು ಬಾಲಕ ಕಣ್ಣಾರೆ ಕಂಡಿದ್ದ. ಬಳಿಕ ಆತನನ್ನು ವಿದ್ಯಾರ್ಥಿನಿ ಕೊಂದಿದ್ದಳು. ಈ ಘಟನೆ ನಂತರ ವಾಚ್‍ಮನ್ ಪರಾರಿಯಾಗಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ.

Facebook Comments

Sri Raghav

Admin