BREAKING : ಫಿಫಾ ವಿಶ್ವಕಪ್ : ಕ್ರೋವೇಶಿಯಾವನ್ನು ಮಣಿಸಿ 2ನೇ ಬಾರಿಗೆ ಚಾಂಪಿಯನ್ ಆದ ಫ್ರಾನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

France--01
ಮಾಸ್ಕೋ. ಜು.15 : ರೋಚಕತೆಯಿಂದ ಕೂಡಿದ್ದ ಫಿಫಾ ವಿಶ್ವಕಪ್ 2017ರ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಮಾಸ್ಕೊದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕ್ರೋವೇಶಿಯಾ ವಿರುದ್ಧ ಫ್ರಾನ್ಸ್ 4-2 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 1998ರ ಬಳಿಕ ಎರಡನೇ ಬಾರಿ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ಕ್ರೋವೇಶಿಯಾ ತಂಡದ ಪ್ರಯತ್ನ ವಿಫಲವಾಗಿದೆ.

ಫ್ರಾನ್ಸ್ ಪರ ಮಾರಿಯೋ ಮಾಂಡ್ಜುಕಿಕ್, ಆಂಟೊಯಿನ್ ಗ್ರೀಜ್ಮನ್, ಪಾಲ್ ಪೋಗ್ಬಾ, ಕ್ಲೈನ್ ಮೆಬ್ಯಾಪ್ ತಲಾ ಒಂದು ಗೋಲು ಬಾರಿಸಿದ್ದಾರೆ. ಕ್ರೊವೇಶಿಯಾ ಪರ ಇವನ್ ಪೆರಿಸಿಕ್ ಮತ್ತು ಮಾರಿಯೋ ಮಂಡ್ಜುಕಿಕ್ ತಲಾ ಒಂದು ಗೋಲು ಬಾರಿಸಿದ್ದಾರೆ. ಫ್ರಾನ್ಸ್ ಎರಡನೇ ಬಾರಿಗೆ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಪಂದ್ಯ ಆರಂಭವಾಗುತ್ತಲೇ ಫ್ರಾನ್ಸ್ ಪರ ಮಾರಿಯೋ ಮ್ಯಾಂಜುಕಿಕ್ ಗೋಲ್ ಖಾತೆ ತೆರೆದರು. 18ನೇ ನಿಮಿಷದಲ್ಲಿ ಮ್ಯಾಂಜುಕಿಕ್ ಸಿಡಿಸಿದ ಗೋಲ್ ಫ್ರಾನ್ಸ್ ಗೆ ಹುಮ್ಮಸ್ಸು ತುಂಬಿತು. ಆದರೆ 28ನೇ ನಿಮಿಷದಲ್ಲಿ ಕ್ರೊವೇಷಿಯಾ ಕೂಡ ಅಂಕವನ್ನು 1-1ಕ್ಕೆ ಸರಿದೂಗಿಸಿತು. ಇವಾನ್ ಪೆರಿಸಿವಿಚ್ ಇತ್ತಂಡಗಳ ಅಂಕವನ್ನು ಸಮಗೊಳಿಸಿದರು.
ಪಂದ್ಯದ ಪ್ರಥಮಾರ್ಧದ ವೇಳೆಗೆ ಫ್ರಾನ್ಸ್ ಮುನ್ನಡೆ ಸಾಧಿಸಿತ್ತು. ಅಂಟಾಯ್ನ್ ಗ್ರೀಜ್ಮನ್ ಅವರು 48ನೇ ನಿಮಿಷದಲ್ಲಿ ಬಾರಿಸಿದ ಗೋಲ್ ಫ್ರಾನ್ಸ್ ಗೆಲುವಿನ ಮುನ್ಸೂಚನೆ ನೀಡಿತು. ಪ್ರಥಮಾರ್ಧದಲ್ಲಿ 3 (45+3) ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಕ್ರೊವೇಷಿಯಾ ಗೊಲ್ ದಾಖಲಿಸಲಿಲ್ಲ.

ಪಂದ್ಯದ ದ್ವಿತೀಯಾರ್ಧದ ಆರಂಭದಿಂದಲೂ ಫ್ರಾನ್ಸ್ ಪಾರಮ್ಯ ಮೆರೆಯಿತು. ಪೌಲ್ ಪೋಗ್ಬಾ 59ನೇ ನಿಮಿಷದಲ್ಲಿ ಬಾರಿಸಿದ ಗೋಲ್ ಕ್ರೋಷಿಯಾವನ್ನು ಒತ್ತಡಕ್ಕೀಡು ಮಾಡಿತು. ಅದಾಗಿ ಕಿಲಿಯನ್ ಎಂಬಪ್ಪೆ 65ನೇ ನಿಮಿಷದಲ್ಲಿ ದಾಖಲಿಸಿದ ಗೋಲ್ ಬಹುತೇಕ ಪಂದ್ಯದ ಫಲಿತಾಂಶವನ್ನು ಸಾರಿತ್ತು.

2018ರ ಫೀಫಾ ವಿಶ್ವಕಪ್ ಫೈನಲ್ ವನ್ ಸೈಡ್ ಪಂದ್ಯ ಅಲ್ಲವೆನ್ನಲು ಕ್ರೊವೇಷಿಯಾದ ಮಾರಿಯೋ ಮ್ಯಾಂಜುಕಿಕ್ 69ನೇ ನಿಮಿಷದಲ್ಲಿ ಸಿಡಿಸಿದ ಗೋಲೇ ಸಾಕ್ಷಿ. ಫ್ರಾನ್ಸ್ ಮುನ್ನಡೆ ಸಾಧಿಸಿದಷ್ಟೂ ಕ್ರೊವೇಷಿಯಾ ಕೂಡ ಬೆನ್ನುಬಿದ್ದು ಉತ್ತಮ ಪೈಪೋಟಿಯನ್ನೇ ನೀಡಿತು. ಆದರೆ ಅಂತಿಮವಾಗಿ ಜಯ ಫ್ರಾನ್ಸ್ ಪರವಾಯಿತು.

Facebook Comments

Sri Raghav

Admin