ಹೊರಟ್ಟಿ ಮನೆಯಲ್ಲಿ ರೊಟ್ಟಿ ರುಚಿ ಸವಿದ ಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda--01

ಹುಬ್ಬಳ್ಳಿ, ಜು.15- ನಗರದ ದೇಸಾಯಿ ಸರ್ಕಲ್ ಬಳಿ ಇರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತೆರಳಿ ಉಪಹಾರ ಸೇವಿಸಿದರು.  ಪಕ್ಷದ ವಿವಿಧ ಕಾರ್ಯಕ್ರಮಗಳ ನಿಮಿತ್ತ ನಗರಕ್ಕೆ ಆಗಮಿಸಿದ ದೇವೇಗೌಡರು, ಹೊರಟ್ಟಿ ಅವರ ಮನೆಗೆ ತೆರಳಿ ಉತ್ತರ ಕರ್ನಾಟಕದ ಪ್ರಸಿದ್ಧ ಬಿಸಿ ಬಿಸಿ ಜೋಳದ ರೊಟ್ಟಿ-ಚಟ್ನಿ ಸೇವಿಸಿದರು.

ನಂತರ ದೇವೇಗೌಡರ ಆಪ್ತರಾಗಿದ್ದ ಎಸ್.ಎಸ್.ಹಿರೇಮಠ್ ನಿವಾಸಕ್ಕೆ ತೆರಳಿ ಕುಟುಂಬದ ಜತೆ ಕೆಲ ಕಾಲ ಕಳೆದರು. ನಂತರ ಬೆಳಗಾವಿಗೆ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಕೋನರೆಡ್ಡಿ, ಮಲ್ಲಿಕಾರ್ಜುನ ಅಕ್ಕಿ, ರಾಜಣ್ಣ ಕೊರವಿ, ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಇದ್ದರು.

Facebook Comments

Sri Raghav

Admin