ಇಂದಿನ ಪಂಚಾಗ ಮತ್ತು ರಾಶಿಫಲ (15-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪ್ರಾಣಿಗಳನ್ನಾಗಲಿ, ಶಿಷ್ಯರನ್ನಾಗಲಿ ಪಳಗಿಸುವಾಗ, ಅವರಿಗೆ ಶಿಕ್ಷಣ ಕೊಡುವಾಗ ಹಿಂಸೆಯಿಲ್ಲದೆ ಅಂದರೆ ಶಾರೀರಿಕ ದಂಡನೆ ಮಾಡದೆಯೇ ಕೆಲಸ ಮಾಡಬೇಕು. ನಯವಾದ, ಇಂಪಾದ ಮಾತನ್ನಾಡಬೇಕು. ಅವನೇ ಧರ್ಮವನ್ನು ಆಚರಿಸತಕ್ಕವನು.  -ಮನುಸ್ಮೃತಿ

Rashi

ಪಂಚಾಂಗ : 15.07.2018 ಭಾನುವಾರ

ಸೂರ್ಯ ಉದಯ ಬೆ.06.01 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಬೆ.08.08 / ಚಂದ್ರ ಅಸ್ತ ರಾ.09.05
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ : ತೃತೀಯ (ರಾ.09.35)
ನಕ್ಷತ್ರ: ಆಶ್ಲೇಷಾ (ಮ.01.28) / ಯೋಗ: ಸಿದ್ಧಿ (ರಾ.08.32)
ಕರಣ: ತೈತಿಲ-ಗರಜೆ (ಬೆ.11.13-ರಾ.09.35)/ ಮಳೆ ನಕ್ಷತ್ರ: ಪುನರ್ವಸು
ಮಾಸ: ಮಿಥುನ / ತೇದಿ: 31

ರಾಶಿ ಭವಿಷ್ಯ :
ಮೇಷ : ವ್ಯಾಪಾರದಲ್ಲಿ ಪೈಪೋಟಿ, ಲಾಭ ಕಡಿಮೆ
ವೃಷಭ : ವಿದ್ಯಾರ್ಥಿಗಳಲ್ಲಿ ಸೋಮಾರಿತನ ಎದ್ದು ಕಾಣುತ್ತದೆ. ಪ್ರಯಾಣದಲ್ಲಿ ಎಚ್ಚರ ವಹಿಸಿ
ಮಿಥುನ: ಶತ್ರುಗಳಿಂದ ಅಪಾಯ ವಿದೆ. ಮುಖ್ಯವಾದ ಕಾಗದ ಪತ್ರಗಳು ಕಾಣೆಯಾಗಲಿವೆ
ಕಟಕ : ಅವಕಾಶಗಳು ಹುಡುಕಿಕೊಂಡು ಬರುತ್ತವೆ
ಸಿಂಹ: ತಡವಾಗಿಯಾದರೂ ನಿಮ್ಮ ಪ್ರತಿಭೆಗೆ ತಕ್ಕ ಗೌರವ, ಪುರಸ್ಕಾರ ಲಭಿಸುತ್ತದೆ
ಕನ್ಯಾ: ಅಡ್ಡಿ-ಆತಂಕಗಳು ಬರುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ತುಲಾ: ನಾಲಿಗೆಯನ್ನು ಮನ ಬಂದಂತೆ ಹರಿಯಬಿಡಬೇಡಿ
ವೃಶ್ಚಿಕ: ಭೂ ವ್ಯವಹಾರದಲ್ಲಿ ನಷ್ಟ ಅನುಭವಿಸುವಿರಿ
ಧನುಸ್ಸು: ಮಾತಿನಿಂದ ಕಲಹ, ಮನಸ್ತಾಪ, ಅಶಾಂತಿ ಮುಂತಾದವುಗಳು ಕಂಡುಬರುತ್ತವೆ
ಮಕರ: ಸರ್ಕಾರದಿಂದ ತೊಂದರೆ, ಹೆಂಡತಿ- ಮಕ್ಕಳ ಜೊತೆ ಜಗಳ ಸಂಭವಿಸಬಹುದು
ಕುಂಭ: ಸ್ತ್ರೀ ಮೂಲಕ ಹಣ ವ್ಯಯವಾಗಲಿದೆ
ಮೀನ: ವಿಪರೀತವಾಗಿ ಖರ್ಚು ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments