ಮಳೆಯಿಂದ ಮನೆ ಮೇಲೆ ಮರ ಬಿದ್ದು ವಿದ್ಯುತ್ ತಂತಿ ತುಂಡು, ಮನೆಯಲ್ಲಿದ್ದವರು ಪಾರು..!

ಈ ಸುದ್ದಿಯನ್ನು ಶೇರ್ ಮಾಡಿ

house-Colleps

ಬೇಲೂರು, ಜು.15- ತಾಲೂಕಿನ ನಾರ್ವೆ ಗ್ರಾಮ ಸಮೀಪದ ಅಬ್ಬಿಹಳ್ಳಿ ಗ್ರಾಮದಲ್ಲಿ ಗಾಳಿ ಮಳೆಗೆ ಮರಗಳು ಮನೆ ಹಾಗೂ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ಮತ್ತು ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರು ಪಾರಾಗಿದ್ದಾರೆ.
ತಾಲೂಕಿನ ಅರೇಹಳ್ಳಿ ಹೋಬಳಿಯೂ ಸಂಪೂರ್ಣ ಮಲೆನಾಡು ಪ್ರದೆಶವಾಗಿದ್ದು, ಇಲ್ಲಿ ದಿನನಿತ್ಯ ಬಿಡುವಿಲ್ಲದಂತೆ ಗಾಳಿ, ಮಳೆ ಬರುತ್ತಿದೆ. ಇಲ್ಲಿ ಜನ ಸಾಮಾನ್ಯರು ಓಡಾಡುವುದೇ ಕಷ್ಟಕರವಾಗಿದೆ. ಜನರು ಮನೆಯಿಂದ ಹೊರ ಬರದಂತಾಗಿದೆ. ಅಲ್ಲಲ್ಲಿ ಮನೆ ಮೇಲೆ, ರಸ್ತೆ ಇನ್ನಿತರೆಡೆ ಮರಗಳು ಬೀಳುವುದು ಸಾಮಾನ್ಯವಾಗಿದೆ. ಆದರೆ ನಿನ್ನೆ ಬಿರುಸಾದ ಗಾಳಿ ಬಂದ ಹಿನ್ನೆಲೆಯಲ್ಲಿ ಅಬ್ಬಿಹಳ್ಳಿ ಗ್ರಾಮದಲ್ಲಿ ಮನೆ ಹಾಗೂ ವಿದ್ಯುತ್ ಕಂಬದ ಮೇಲೆ ಮರಗಳು ಬಿದ್ದಿವೆ. ಇದರಿಂದ ಮನೆಯಲ್ಲಿನ ಗೃಹೊಪಯೋಗಿ ವಸ್ತುಗಳು ಹಾನಿಗೀಡಾಗಿ ಸಾಕಷ್ಟು ನಷ್ಟ ಸಂಭವಿಸಿದೆ.

Facebook Comments