ಶಿರಾಡಿಘಾಟ್ ರಸ್ತೆ ಇಂದಿನಿಂದ ಸಂಚಾರಕ್ಕೆ ಮುಕ್ತ

ಈ ಸುದ್ದಿಯನ್ನು ಶೇರ್ ಮಾಡಿ

Revanna--01

ಹಾಸನ, ಜು.15- ಕಳೆದ ಆರು ತಿಂಗಳಿಂದ ಬಂದ್ ಆಗಿದ್ದ ಮಂಗಳೂರು-ಬೆಂಗಳೂರು-ಶಿರಾಡಿಘಾಟ್ ರಸ್ತೆ ಇಂದಿನಿಂದ ಸಂಚಾರಕ್ಕೆ ಮುಕ್ತವಾಗಿದೆ. ಜಿಟಿ ಜಿಟಿ ಮಳೆಯಲ್ಲೇ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಶಿರಾಡಿಘಾಟ್ ರಸ್ತೆಗೆ ಪತ್ನಿ ಭವಾನಿ ಅವರೊಂದಿಗೆ ಪೂಜೆ ನೆರವೇರಿಸಿ ಟೇಪ್ ಕತ್ತರಿಸುವ ಮೂಲಕ ಲೋಕಾರ್ಪಣೆ ಮಾಡಿದರು.

ಕಳೆದ ಆರು ತಿಂಗಳಿಂದ ಶಿರಾಡಿಘಾಟ್ ರಸ್ತೆ ಕಾಂಕ್ರಿಟೀಕರಣ ಆಮೆಗತಿಯಲ್ಲಿ ಸಾಗಿತ್ತು. ಜತೆಗೆ ಇತ್ತೀಚೆಗಿನ ಮಳೆಯಿಂದಾಗಿ ಅಲ್ಲಲ್ಲೇ ಗುಡ್ಡ ಕುಸಿದು ಕಾಮಗಾರಿ ಮತ್ತೂ ನಿಧಾನವಾಗಿತ್ತು.   ಅಂತು ಇಂತು ಕಾಮಗಾರಿ ಮುಕ್ತಾಯಗೊಂಡಿದ್ದು, ಇಂದಿನಿಂದ ವಾಹನ ಸವಾರರು ನಿರಾಳವಾಗಿ ಸಂಚರಿಸಬಹುದಾಗಿದೆ.

ಉದ್ಘಾಟನೆ ವೇಳೆ ಸಚಿವ ಯು.ಟಿ.ಖಾದರ್, ಸಂಸದ ನಳಿನ್‍ಕುಮಾರ್ ಕಟಿಲ್, ಮಾಜಿ ಸಚಿವ ರಮಾನಾಥ ರೈ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಜರಿದ್ದರು.   ಮಧ್ಯಾಹ್ನ 3 ಗಂಟೆಗೆ ಗುಂಡ್ಯಾದಲ್ಲಿ ಏರ್ಪಡಿಸಿದ್ದ ಉದ್ಘಾಟನಾ ಸಭೆಯಲ್ಲಿ ರೇವಣ್ಣ ಪಾಲ್ಗೊಂಡು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

Facebook Comments

Sri Raghav

Admin