ಮದುವೆ ದಿಬ್ಬಣದಿಂದ ಮಸಣಕ್ಕೆ, ಭೀಕರ ರಸ್ತೆ ಅಪಘಾತದಲ್ಲಿ 18 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident-1

ಇಸ್ಲಾಮಾಬಾದ್, ಜು.16-ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟು, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಸಂಭವಿಸಿದೆ.  ಹೈದರಾಬಾದ್ ಜಿಲ್ಲೆಯ ಹಾಲಾ ಪ್ರದೇಶದಲ್ಲಿ ಮದುವೆ ದಿಬ್ಬಣದ 18 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್‍ಗೆ ಅತಿವೇಗದ ಟ್ರೈಲರ್ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಹಿರಿಯ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ದೋಷಪೂರಿತ ಚಕ್ರವನ್ನು ಬದಲಿಸಲು ನಿಲುಗಡೆಯಾಗಿದ್ದಾಗ, ಟ್ರೈಲರ್ ಹಿಂದಿನಿಂದ ರಭಸವಾಗಿ ಗುದ್ದಿತು. ಈ ದುರ್ಘಟನೆಯಲ್ಲಿ 18 ಮಂದಿ ಮೃತಪಟ್ಟು, ಇತರ 30 ಜನರು ಗಾಯಗೊಂಡರು. ಗಾಯಾಳುಗಳು ಹಾಲಾ ಮತ್ತು ಹೈದರಾಬಾದ್ ಸಿವಿಲ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.

Facebook Comments

Sri Raghav

Admin