ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ಬೈಕ್ ರ‍್ಯಾಲಿ, ಪಾಲಿಕೆಗೆ ಮುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

kannada

ಬೆಂಗಳೂರು, ಜು.16- ರಾಜ್ಯದಲ್ಲಿರುವ ಎಲ್ಲಾ ಕಾರ್ಖಾನೆಗಳು, ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಿದ್ದರೂ ಕೂಡ ಅದನ್ನು ಅನ್ಯ ರಾಜ್ಯ ವ್ಯಾಪಾರಿಗಳು, ಉದ್ಯಮಿಗಳು ಪಾಲಿಸುತ್ತಿಲ್ಲ. ಸರ್ಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಕರ್ನಾಟಕ ಜನಪರ ವೇದಿಕೆ ಇಂದು ತಮಿಳುನಾಡು ಗಡಿಯ ಅತ್ತಿಬೆಲೆಯಿಂದ ಬಿಬಿಎಂಪಿವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿತು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಗಡಿಭಾಗಗಳಲ್ಲಿ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದನ್ನು ತಡೆಯಲು ಸಂಘಟನೆಗಳು ಒಂದಾಗಬೇಕಾದ ಅಗತ್ಯತೆಯು ಕೂಡ ಇದೆ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಕನ್ನಡ ಭಾಷೆಗೆ ಅಪರಮಾನ ಮಾಡುವವರ ವಿರುದ್ಧ ದಿಟ್ಟ ಹೋರಾಟ ನಡೆಸಲಿದೆ ಎಂದು ಹೇಳಿದರು.

ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆದಿದೆ. ಅನ್ಯ ಭಾಷಿಗರು ಇಲ್ಲಿ ನೆಲೆ ಕಂಡು ಕೊಂಡಿದ್ದಾರೆ. ನಮ್ಮ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಕನ್ನಡವನ್ನು ಕಡೆಗಣಿಸುತ್ತಾರೆ. ಅಸಂಘಟಿತ ವಲಯದಲ್ಲಿ ಕನ್ನಡ ಕಾರ್ಮಿಕರ ಶೋಷಣೆ ಹೆಚ್ಚುತ್ತಿದೆ ಎಂದು ಆರೋಪಿಸಿದರು. ಪ್ರಸ್ತುತ ನಾವು ಕನ್ನಡ ನಾಮಫಲಕಗಳನ್ನು ಅಳವಡಿಸಬೇಕೆಂದು ತಾಳ್ಮೆಯಿಂದಲೇ ಎಲ್ಲರನ್ನು ಕೇಳಿಕೊಳ್ಳುತ್ತೇವೆ . ಆದರೆ ನಮ್ಮ ತಾಳ್ಮೆಯನ್ನು ಕೆಣಕುವುದು ಸರಿಯಲ್ಲ ಎಂದು ಹೇಳಿದರು.

Facebook Comments

Sri Raghav

Admin