ಪತ್ರಕರ್ತ ಉಪೇಂದ್ರ ರೈ ಸಿಬಿಐ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Upedra--01

ನವದೆಹಲಿ, ಜು.16-ಬಲತ್ಕಾರದ ಹಣ ವಸೂಲಿ ಮತ್ತು ಭ್ರಷ್ಟಾಚಾರದ ಹೊಸ ಪ್ರಕರಣದ ಸಂಬಂಧ ಪತ್ರಕರ್ತ ಉಪೇಂದ್ರ ರಾಯ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಶಕ್ಕೆ ತೆಗೆದುಕೊಂಡಿದೆ.  ಮುಂಬೈನ ಕಟ್ಟಡ ನಿರ್ಮಾತೃ ಒಬ್ಬರಿಂದ ಉಪೇಂದ್ರ ರಾಯ್ 15 ಕೋಟಿ ರೂ.ಗಳನ್ನು ವಸೂಲಿ ಮಾಡಿದ್ದರೆಂಬ ಆರೋಪದ ಮೇಲೆ ಮೇ 5ರಂದು ಅವರ ವಿರುದ್ಧ ದೂರು ದಾಖಲಾಗಿ, ನಂತರ ಅವರನ್ನು ಬಂಧಿಸಲಾಗಿತ್ತು.  ಮುಂಬೈ ಮೂಲದ ವೈಟ್ ಲಯನ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಬಲ್ವಿಂದರ್ ಸಿಂಗ್ ಮಲ್ಹೋತ್ರಾ ಈ ಸಂಬಂಧ ದೂರು ನೀಡಿದ್ದರು. ರಾಯ್ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಸಿಬಿಐ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

Facebook Comments

Sri Raghav

Admin