ಕೆಆರ್‍ಎಸ್-ರಂಗನತಿಟ್ಟಿಗೆ ಪ್ರವೇಶ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

KRS-Ranga
ಮೈಸೂರು, ಜು.16- ಹೆಚ್ಚುತ್ತಿರುವ ನೀರಿನ ಅರಿವಿನಿಂದಾಗಿ ಪ್ರಮುಖ ಪ್ರವಾಸಿ ತಾಣಗಳಾದ ಕೆಆರ್‍ಎಸ್ ಹಾಗೂ ರಂಗನತಿಟ್ಟು ಪಕ್ಷಿಧಾಮಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಇಂದು ಬೆಳಗ್ಗೆ ಕೆಆರ್‍ಎಸ್‍ನಲ್ಲಿ 123.25 ಕ್ಯೂಸೆಕ್‍ನಷ್ಟು ನೀರು ಭರ್ತಿಯಾಗಿದ್ದು, ಗರಿಷ್ಠ ಮಟ್ಟ 124.80 ಕ್ಯೂಸೆಕ್ ಇದೆ. ಒಳ ಹರಿವು 66,456 ಕ್ಯೂಸೆಕ್ ಇದ್ದರೆ, ಹೊರ ಹರಿವು 75,720 ಕ್ಯೂಸೆಕ್ ಆಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ನೀರನ್ನು ಜಲಾಶಯಗಳ ಮೂಲಕ ನದಿಗೆ ಹರಿಸಲಾಗುತ್ತಿದ್ದು, ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಪ್ರವೇಶ ನಿಷೇಧಿಸಿದೆ.

ಕೆಆರ್‍ಎಸ್‍ನ ಬೃಂದಾವನ ಹಾಗೂ ದೋಣಿ ವಿಹಾರ ಕೇಂದ್ರದಲ್ಲೂ ಹೆಚ್ಚಿನ ನೀರು ಹರಿಯುತ್ತಿದೆ. ಜತೆಗೆ ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮದ ಬಳಿಯೂ ನೀರಿನ ಸೆಲೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ತಡೆಯೊಡ್ಡಲಾಗಿದೆ.  ಹೆಚ್ಚಿನ ಭದ್ರತೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ನಿಯೋಜಿಸಲಾಗಿದ್ದು, ಯಾವುದೇ ತೊಂದರೆಯಾಗದಂತೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

Facebook Comments