ಫಿಫಾ-ವಿಶ್ವಕಪ್’ಗೆ ವರ್ಣರಂಜಿತ ತೆರೆ

ಈ ಸುದ್ದಿಯನ್ನು ಶೇರ್ ಮಾಡಿ

football

ಮಾಸ್ಕೋ, ಜು.16-ರಷ್ಯಾದಲ್ಲಿ ಒಂದು ತಿಂಗಳ ಕಾಲ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ರೋಚಕ ಫೈನಲ್‍ನಲ್ಲಿ ಫ್ರಾನ್ಸ್ ತಂಡ ಪ್ರಶಸ್ತಿ ಮುಡಿಗೇರಿಸುವುದರೊಂದಿಗೆ ಕಾಲ್ಚೆಂಡಿನ ಮಹಾ ಸಮರಕ್ಕೆ ವರ್ಣರಂಜಿತ ತೆರೆ ಬಿದ್ದಿದೆ. ಕ್ರೊವೇಷ್ಯಾ ರನ್ನರ್-ಅಪ್ ಆಗಿದ್ದು, ಬೆಲ್ಜಿಯಂ ತೃತೀಯ ಸ್ಥಾನ ಗಳಿಸಿದೆ.  ಇದೇ ಸಂದರ್ಭದಲ್ಲಿ ಅಡಿಡಾಸ್ ಚಿನ್ನದ ಚೆಂಡು, ಗೋಲ್ಡನ್ ಬೂಟ್ ಸೇರಿದಂತೆ ಫಿಫಾ ಫುಟ್ಬಾಲ್ ಪಂದ್ಯಾವಳಿಯ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳನ್ನು ನಿನ್ನೆ ತಡರಾತ್ರಿ ಪ್ರಕಟಿಸಲಾಗಿದೆ. ಕ್ರೊವೇಷ್ಯಾ ತಂಡದ ನಾಯಕ ಲುಕಾ ಮೊಡ್ರಿಕ್ ಗೋಲ್ಡನ್ ಬಾಲ್ ಹಾಗೂ ಇಂಗ್ಲೆಂಡ್ ಟೀಮ್ ಕ್ಯಾಪ್ಟನ್ ಹ್ಯಾರಿ ಕೇನ್, ಗೋಲ್ಡನ್ ಶೂ ಪ್ರಶಸ್ತಿಗಳನ್ನು ಪಡೆದಿದ್ದಾರೆ.

football-6

ಗೋಲ್ಡನ್ ಬಾಲ್ : ವಿಶ್ವಕಪ್ ಫೈನಲ್‍ನಲ್ಲಿ ಫ್ರಾನ್ಸ್ ವಿರುದ್ಧ 4-2 ಗೋಲುಗಳಿಂದ ಪರಾಭವಗೊಂಡು ರನ್ನರ್-ಅಪ್ ಆಗಿರುವ ಕ್ರೊವೇಷ್ಯಾ ನಾಯಕ ಲುಕಾ ಮೊಡ್ರಿಕ್ ನೀಡಿದ ಭರ್ಜರಿ ಪ್ರದರ್ಶನದ ಸಾಧನೆ ಗುರುತಿಸಿ ಗೋಲ್ಡನ್ ಬಾಲ್ (ಪ್ರಥಮ) ಪ್ರಶಸ್ತಿ ಗಳಿಸಿದ್ದಾರೆ. ಬೆಲ್ಜಿಯಂನ ಎಡೆನ್ ಹಜರ್ಡ್ ಮತ್ತು ಫ್ರಾನ್ಸ್‍ನ ಅಂಟೋಯಿನ್ ಗ್ರೀಝ್‍ಮ್ಯಾನ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಚಿನ್ನದ ಚೆಂಡು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

football-1
ಗೋಲ್ಡನ್ ಬೂಟ್ : ಫಿಫಾ ವಿಶ್ವಕಪ್‍ನಲ್ಲಿ ಒಟ್ಟು ಆರು ಭರ್ಜರಿ ಗೋಲುಗಳನ್ನು ಬಾರಿಸಿದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಗೋಲ್ಡನ್ ಬೂಟ್ (ಪ್ರಥಮ) ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

football-4

ತಲಾ ನಾಲ್ಕು ಗೋಲುಗಳೊಂದಿಗೆ ಫ್ರಾನ್ಸ್‍ನ ಅಂಟೋಯಿನ್ ಗ್ರೀಝ್‍ಮ್ಯಾನ್ ಹಾಗೂ ಬೆಲ್ಜಿಯಂನ ರೋಮೆಲು ಲುಕಾಕು ಕ್ರಮವಾಗಿ ಎರಡನೇ ಮತ್ತು ಮೂರನೇ ಗೋಲ್ಡನ್ ಬೂಟ್ ಪ್ರಶಸ್ತಿಗಳನ್ನು ಗಳಿಸಿದ್ದಾರೆ.  ಫ್ರಾನ್ಸ್‍ನ ಕೆಲಿಯಾನ್ ಬಾಪ್ಪೆ, ರಷ್ಯಾದ ಡೆನಿಸ್ ಚೆರಿಶೆವ್ ಮತ್ತು ಪೆÇೀರ್ಚುಗಲ್‍ನ ಕ್ರಿಸ್ಟಿಯಾನೋ ರೋನಾಲ್ಡೋ ಅವರೂ ಸಹ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಗೋಲ್ಡನ್ ಗ್ಲೋವ್ : ಫಿಫಾ ವಿಶ್ವಕಪ್ ಕಾಲ್ಚೆಂಡಿನ ಸಮರದಲ್ಲಿ ಅದ್ಭುತವಾಗಿ ಗೋಲ್ ಕೀಪಿಂಗ್ ಮಾಡಿದ ಸಾಧಕರಿಗಾಗಿ ನೀಡುವ ಗೋಲ್ಡನ್ ಗ್ಲೋವ್ ಪ್ರಶಸ್ತಿ ಬೆಲ್ಜಿಯಂನ ಥಿಬೌಟ್ ಕೋರ್ಟೊಯಿಸ್ ಪಾಲಾಗಿದೆ.

football-3

ಅತ್ಯುತ್ತಮ ಯುವ ಆಟಗಾರ : ವಿಶ್ವಕಪ್ ಫೈನಲ್‍ನಲ್ಲಿ ಗೋಲು ಬಾರಿಸಿದ ಫ್ರಾನ್ಸ್‍ನ 19 ವರ್ಷದ ಕೆಲಿಯನ್ ಬಾಪ್ಪೆ ಅವರು ಪಂದ್ಯಾವಳಿಯ ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ ಗಳಿಸಿದ್ದಾರೆ.  1958ರಲ್ಲಿ ಪಿಲೆ ನಂತರ ಫೈನಲ್‍ನಲ್ಲಿ ಗೋಲು ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಗೆ ಕೆಲಿಯನ್ ಪಾತ್ರರಾಗಿದ್ದಾರೆ.

football-2

ಅತ್ಯುತ್ತಮ ಆಟ ಪ್ರದರ್ಶನ ಪ್ರಶಸ್ತಿ : ಹದಿನಾರನೇ ಸುತ್ತಿನಲ್ಲಿ ಅತಿಥೇಯ ರಷ್ಯಾ ವಿರುದ್ಧ ಪೆನಾಲ್ಟಿಗಳಲ್ಲಿ 4-3 ಗೋಲುಗಳಿಗೆ ಜಯ ಸಾಧಿಸಿದ ಸ್ಪೇನ್ ತಂಡಕ್ಕೆ ಅತ್ಯುತ್ತಮ ಆಟ ಪ್ರದರ್ಶನ (ಫೇರ್ ಪ್ಲೆ ಅವಾರ್ಡ್) ಟ್ರೋಫಿ ನೀಡಲಾಗಿದೆ.

football-5

ಫ್ರಾನ್ಸ್‍ಗೆ 260 ಕೋಟಿ ರೂ. ಭರ್ಜರಿ ಬಹುಮಾನ

ಮಾಸ್ಕೋ, ಜು.16-ರಷ್ಯಾದಲ್ಲಿ ಒಂದು ತಿಂಗಳ ಕಾಲ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಫ್ರಾನ್ಸ್ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.  ಕಾಲ್ಚೆಂಡಿನ ಮಹಾಸಮರದಲ್ಲಿ ವಿಜಯಿಯಾಗಿರುವ ಫ್ರೆಂಚ್ ಆಟಗಾರರು 38 ದಶಲಕ್ಷ ಡಾಲರ್‍ಗಳು ಅಂದರೆ 260 ಕೋಟಿ ರೂ.ಗಳ ಬಹುಮಾನ ಗೆದ್ದುಕೊಂಡಿದ್ದಾರೆ.  ರನ್ನರ್-ಅಪ್ ಆಗಿರುವ ಕ್ರೊವೇಷ್ಯಾ 28 ದಶಲಕ್ಷ ಡಾಲರ್ (192 ಕೋಟಿ ರೂ.ಗಳ) ಮೊತ್ತದ ಬಹುಮಾನ ಪಡೆದಿದೆ.

ರಷ್ಯಾ ರಾಜಧಾನಿ ಮಾಸ್ಕೋದ ಲುಜ್‍ನಿಕ್ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ರೋಚಕ ಫೈನಲ್‍ನಲ್ಲಿ ಕ್ರೊವೇಷ್ಯಾ ವಿರುದ್ಧ ಫ್ರಾನ್ಸ್ 4-2 ಗೋಲುಗಳಿಂದ ಭರ್ಜರಿ ಜಯ ಸಾಧಿಸಿದೆ. ಫ್ರಾನ್ಸ್ ಪರ ಮಾರಿಯೋ ಮಾಂಡ್ಜುಕಿಕ್, ಅಂಟೊಯಿನ್ ಗ್ರೀಝ್‍ಮ್ಯಾನ್, ಪಾಲ್ ಪೋಗ್ಟಾ ಮತ್ತು ಕೆಲಿಯನ್ ಬಾಪ್ಪೆ ತಲಾ ಒಂದೊಂದು ಗೋಲು ಬಾರಿಸಿ ತಂಡದ ವಿಜಯದ ರೂವಾರಿಗಳಾದರು.  1998ರಲ್ಲಿ ಮೊದಲ ಬಾರಿ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿದ್ದ ಫ್ರಾನ್ಸ್ 20 ವರ್ಷಗಳ ಬಳಿಕ ಎರಡನೇ ಸಲ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.

Facebook Comments

Sri Raghav

Admin