ಏಡ್ಸ್’ಗಿಂತಲೂ ಡೇಂಜರ್ ಹೆಪಟೈಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

Hepatitis

ವಿಶ್ವದಾದ್ಯಂತ ಸುಮಾರು 500 ದಶ ಲಕ್ಷ ಮಂದಿ ಹೆಪಟೈಟಿಸ್ ಬಿ ಅಥವಾ ಹೆಪಟೈಟಿಸ್ ಸಿ ರೋಗದಿಂದ ನರಳುತ್ತಿದ್ದಾರೆ. ಈ ಮಾರಕ ರೋಗಕ್ಕೆ ಸಕಾಲದಲ್ಲಿ ಚಿಕಿತ್ಸೆ ನೀಡಿ ನಿಯಂತ್ರಿಸದಿದ್ದರೆ, ಇದು ಸಿರ್ರೋಸಿಸ್ ಎಂಬ ಯಕೃತ್ತಿನ ಗಂಭೀರ ಸಮಸ್ಯೆಗೆ ಕಾರಣವಾಗಿ ಲಿವರ್ ಕ್ಯಾನ್ಸರ್ ಅಥವಾ ಲಿವರ್ ವೈಫಲ್ಯದಂತಹ ತೊಡಕುಗಳಿಗೆ ಎಡೆ ಮಾಡಿಕೊಡುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಮಂದಿ ಇದು ಏಡ್ಸ್‍ಗಿಂತಲೂ ಭೀಕರ ರೋಗ ಎಂದು ಪರಿಗಣಿಸಿದ್ದಾರೆ. ವಾಸ್ತವ ಸಂಗತಿ ಎಂದರೆ ಎಚ್‍ಐವಿ/ಏಡ್ಸ್‍ಗಿಂತಲೂ ಹೆಪಟೈಟಿಸ್ ಬಿ ಅಥವಾ ಸಿ ರೋಗದಿಂದ ಪ್ರತಿ ವರ್ಷ 1.5 ದಶಲಕ್ಷ ಮಂದಿ ಮೃತರಾಗುತ್ತಿದ್ದಾರೆ. 4.4 ದಶಲಕ್ಷ ಮಂದಿ ಈ ಮಾರಕ ರೋಗದಿಂದ ನರಳುತ್ತಿದ್ದಾರೆ.

ಹೆಪಟೈಟಿಸ್ ಎಂದರೇನು..?
ಹೆಪಟೈಟಿಸ್ ಅಂದರೆ ಈಲಿಯುರಿತ ಅಥವಾ ಯಕೃತ್ತಿನ (ಲಿವರ್) ಉರಿಯೂತ. ಕಾಮಾಲೆಯಂತಹ ರೋಗಲಕ್ಷಣವನ್ನು ಪ್ರಕಟಿಸುವ ವೈರಸ್ ಸೋಂಕನ್ನು ಹೆಪಟೈಟಿಸ್ ಎನ್ನುತ್ತಾರೆ. ಇವುಗಳಲ್ಲಿ ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಎಂಬ ಐದು ವಿಧಗಳಿದ್ದು, ಐದು ವಿವಿಧ ವೈರಾಣುಗಳಿಂದ ಉಂಟಾಗುತ್ತವೆ.
ಇವುಗಳಲ್ಲಿ ಎ ಮತ್ತು ಇ ಅಲ್ಪಾವಧಿ ಸೋಂಕಿನ ಸ್ವರೂಪಗಳಾಗಿದ್ದು, ಕಡಿಮೆ ತೀವ್ರತೆ ಹೊಂದಿರುತ್ತದೆ. ಹೆಪಟೈಟಿಸ್ ಬಿ.ಸಿ. ಮತ್ತು ಡಿ ದೀರ್ಘಾವಧಿ ಸೋಂಕು ಆಗಿದ್ದು ಆತಂಕಕಾರಿ ಜಟಿಲ ಸಮಸ್ಯೆಗಳನ್ನು ಉಂಟು ಮಾಡುತ್ತವೆ.

ಕಾರಣಗಳು : 
ಹೆಪಟೈಟಿಸ್ ಎ ಕಲುಷಿತ ಆಹಾರ, ನೀರು ಮತ್ತು ಸೋಂಕಿತ ವ್ಯಕ್ತಿಯ ಮಲದ ಸಂಪರ್ಕದಿಂದ ಹರಡುತ್ತದೆ. ಹೆಪಟೈಟಿಸ್ ಬಿ ವೈರಾಣು ರಕ್ತ, ಜೊಲ್ಲು, ವೀರ್ಯ, ಮೂತ್ರ ಮತ್ತು ಕಣ್ಣೀರಿನಂತಹ ದೇಹದ ದ್ರಾವಣಗಳಿಂದ ಹರಡುತ್ತದೆ. ಹೈಪಟೈಟಿಸ್ ಸೋಂಕಿಗೆ ಪುರುಷರ ನಡುವೆ ಸಲಿಂಗ ರತಿ, ಬಹು ಸಂಗಾತಿಗಳೊಂದಿಗೆ ಲೈಂಗಿಕ ಸಂಪರ್ಕ, ಸೋಂಕಿತ ವ್ಯಕ್ತಿಗಳೊಂದಿಗೆ ಲೈಂಗಿಕ ಕ್ರಿಯೆ, ಅಸುರಕ್ಷಿತ ಲೈಂಗಿಕ ಸಂಪರ್ಕ, ಮಾದಕ ವಸ್ತು ಸೇವನೆ, ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ, ದೀರ್ಘಕಾಲದ ಲಿವರ್ ರೋಗವಿರುವ ವ್ಯಕ್ತಿಗಳು, ಅತಿ ಹೆಚ್ಚು ಹೆಪಟೈಟಿಸ್ ಸೋಂಕು ಹೊಂದಿರುವ ದೇಶಗಳಲ್ಲಿ ಪ್ರವಾಸ, ಅಸುರಕ್ಷಿತ ರಕ್ತ ಪ್ರಸರಣ ಮತ್ತು ಡಯಾಲಿಸಿಸ್ ಇತ್ಯಾದಿಯಂತಹ ಪ್ರಕರಣಗಳಲ್ಲಿ ಈ ರೋಗ ಕಂಡುಬರುತ್ತದೆ.

ರೋಗ ಲಕ್ಷಣ ಮತ್ತು ನಿಯಂತ್ರಣ ಕ್ರಮ : 
ಸುಸ್ತಾಗುವಿಕೆ, ಕೀಲು ಮತ್ತು ಮಾಂಸ ಖಂಡಗಳ ನೋವು, ಹಸಿವಾಗದಿರುವಿಕೆ, ವಾಕರಿಕೆ, ವಾಂತಿ ಮತ್ತು ಬೇಧಿಯಂತಹ ಲಕ್ಷಣಗಳೊಂದಿಗೆ ಸಣ್ಣ ಪ್ರಮಾಣದ ಜ್ವರವನ್ನು ಹೊಂದಿರುತ್ತದೆ. ರೋಗ ಉಲ್ಬಣಗೊಂಡಂತೆ ಪಿತ್ತಾಶಯ ಗಾತ್ರದಲ್ಲಿ ದೊಡ್ಡದಾಗಿ, ನೋವು ಪೂರಿತವಾಗಿರುತ್ತದೆ. ಪಿತ್ತರಸದಲ್ಲಿರುವ ಬೈಲ್ ಅಂಶಗಳು ರಕ್ತದಲ್ಲಿ ಅತಿಯಾಗಿ ಶೇಖರಣೆಗೊಳ್ಳುವುದರಿಂದ ಚರ್ಮ ಮತ್ತು ಕಣ್ಣಿನ ಬಳಿಯ ಭಾಗ ಹಳದಿ ಬಣ್ಣಕ್ಕೆ ತಿರುಗಿ ಕಾಮಾಲೆ (ಜಾಂಡೀಸ್) ಉಂಟಾಗುತ್ತದೆ. ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ ಸಮಸ್ಯೆಗಳನ್ನು ಔಷಧಿಗಳು ಮತ್ತು ಲಸಿಕೆಗಳ ಮೂಲಕ ನಿಯಂತ್ರಿಸಬಹುದಾಗಿದೆ. ಜತೆಗೆ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ದೂರ ಉಳಿಯುವಿಕೆ ಹಾಗೂ ನೈರ್ಮಲ್ಯೀಕರಣ ಪಾಲನೆ, ಶುದ್ಧ ಆಹಾರ ಮತ್ತು ನೀರು ಸೇವನೆ ಯಿಂದ ಈ ರೋಗವನ್ನು ತಡೆಗಟ್ಟಬಹುದು.

ಸಲಿಂಗ ರತಿ, ಬಹು ಸಂಗಾತಿಗಳೊಂದಿಗೆ ಲೈಂಗಿಕ ಸಂಪರ್ಕ, ಸೋಂಕಿತ ವ್ಯಕ್ತಿಗಳೊಂದಿಗೆ ಲೈಂಗಿಕ ಕ್ರಿಯೆ, ಅಸುರಕ್ಷಿತ ಲೈಂಗಿಕ ಸಂಪರ್ಕ, ಮಾದಕ ವಸ್ತು ಸೇವನೆ, ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ತಪ್ಪಿಸುವಿಕೆ, ಅತಿ ಹೆಚ್ಚು ಹೆಪಟೈಟಿಸ್ ಸೋಂಕು ಹೊಂದಿ ರುವ ದೇಶಗಳಲ್ಲಿ ಪ್ರವಾಸ ನಿಯಂತ್ರಿಸು
ವಿಕೆ, ಅಸುರಕ್ಷಿತ ರಕ್ತ ಪ್ರಸರಣ ಮತ್ತು ಡಯಾಲಿಸಿಸ್ ಇತ್ಯಾದಿ ಬಗ್ಗೆ ಎಚ್ಚರ ವಹಿಸುವಿಕೆಯಿಂದ ಹೆಪಟೈಟಿಸ್‍ಅನ್ನು ನಿಯಂತ್ರಿಸಬಹುದು ಎಂದು ತಜ್ಞವೈದ್ಯರು ಹೇಳುತ್ತಾರೆ.

ಮಾರಕ ಏಡ್ಸ್‍ಗಿಂತಲೂ ಮಹಾ ಹೆಮ್ಮಾರಿ ಯಾಗಿರುವ ಹೆಪಟೈಟಿಸ್ ರೋಗವನ್ನು ನಿರ್ಮೂಲನೆ ಮಾಡಲು ರೋಗಿಗಳು, ನೀತಿ ರೂಪಕರು, ಸಾರ್ವಜನಿಕರು
ಮತ್ತು ವೈದ್ಯಕೀಯ ಕ್ಷೇತ್ರದ ವೃತ್ತಿಪರರ ನಡುವೆ ಒಂದು ಏಕೀಕೃತ ಧೋರಣೆಯ ಅಗತ್ಯವಿದೆ. 2030ರ ವೇಳೆಗೆ ಒಂದು ಸಾರ್ವಜನಿಕ ಆರೋಗ್ಯಕ್ಕೆ ಆತಂಕವಾಗಿರುವ  ಹೆಪಟೈಟಿಸ್‍ಅನ್ನು ನಿರ್ಮೂಲನೆ ಮಾಡುವ ಗುರಿಯೊಂದಿಗೆ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‍ಒ) ಪ್ರಥಮ ಜಾಗತಿಕ ನಿರ್ಮೂಲನೆ ಕಾರ್ಯತಂತ್ರವನ್ನು ಪ್ರಕಟಿಸಿದೆ.

ಜಗತ್ತಿನ 100ಕ್ಕೂ ಹೆಚ್ಚು ದೇಶಗಳು ಜುಲೈ 28ರಂದು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಿ ಈ ಹೆಮ್ಮಾರಿಯನ್ನು ನಿರ್ಮೂಲನೆ ಮಾಡುವ ಪಣತೊಟ್ಟಿವೆ. ಈ ಸಂದರ್ಭದಲ್ಲಿ ಈ ಕೆಳಗಿನ ಕಾರ್ಯತಂತ್ರಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ. ಹೆಪಟೈಟಿಸ್‍ನ ವಿವಿಧ ರೂಪಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಅವು ಹೇಗೆ ಹರಡುತ್ತವೆ ಎಂಬ ಬಗ್ಗೆ ಮಾಹಿತಿ ನೀಡುವುದು.  ವೈರಾಣುವಿನಿಂದ ಹರಡುವ ಹೆಪಟೈಟಿಸ್ ಮತ್ತು ಅದಕ್ಕೆ ಸಂಬಂಧಪಟ್ಟ ರೋಗಗಳ ತಡೆ, ತಪಾಸಣೆ ಮತ್ತು ನಿಯಂತ್ರಣವನ್ನು ಬಲಗೊಳಿಸುವುದು.   ಹೆಪಟೈಟಿಸ್ ಪ್ರತಿ ರಕ್ಷಣಾ ವ್ಯವಸ್ಥೆಯು ವ್ಯಾಪಕವಾಗಿ ಲಭಿಸುವಂತೆ ಮಾಡುವುದು ಹಾಗೂ ಇದನ್ನು ರಾಷ್ಟ್ರೀಯ ಪ್ರತಿರಕ್ಷಣಾ ಕಾರ್ಯಕ್ರಮವನ್ನಾಗಿ ರೂಪಿಸುವುದು.  ಹೆಪಟೈಟಿಸ್ ಹೆಮ್ಮಾರಿಗೆ ಜಗತ್ತ ಸ್ಪಂದಿಸು ವಂತೆ ಸಮನ್ವಯಗೊಳಿಸುವುದು.

Facebook Comments

Sri Raghav

Admin