ಮೆಟ್ರೋಗೆ 200 ಕೋಟಿ ಕೊಟ್ಟಿದ್ದ ಇನ್ಫೋಸಿಸ್‍ ನಿಂದ ಮತ್ತೊಂದು ಮೆಚ್ಚುಗೆಯ ಕೆಲಸ..!

ಈ ಸುದ್ದಿಯನ್ನು ಶೇರ್ ಮಾಡಿ

Police-Station-Infosys

ಬೆಂಗಳೂರು, ಜು.16- ಮೈಸೂರು ಮತ್ತು ಬೆಂಗಳೂರಿನಲ್ಲಿ ಅತ್ಯಾಧುನಿಕ ಪೊಲೀಸ್ ಠಾಣೆಗಳನ್ನು ಸಂಸ್ಥೆ ವತಿಯಿಂದ ನಿರ್ಮಿಸಲಾಗುವುದು ಎಂದು ಇನ್ಫೋಸಿಸ್‍ನ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಇಂದಿಲ್ಲಿ ಭರವಸೆ ನೀಡಿದರು.ವಿಧಾನಸೌಧದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರೊಂದಿಗೆ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದರು.

ಪೊಲೀಸರು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರಿಗಾಗಿ ಮನೆಗಳನ್ನು ಕಟ್ಟಿಕೊಡುತ್ತಿದ್ದೇವೆ. ಈ ನಿಟ್ಟಿನಲ್ಲಿ 11 ಸಾವಿರ ಮನೆಗಳ ನಿರ್ಮಾಣ ಮಾಡಿದ್ದೇವೆ. ಪೊಲೀಸರ ಮನೆ ಹಾಗೂ ಕಚೇರಿ ವಾತಾವರಣ ಉತ್ತಮವಾಗಿರಬೇಕು. ಅವರು ಕೆಲಸ ನಿರ್ವಹಿಸುವ ಠಾಣೆಗಳಲ್ಲಿ ಎಲ್ಲಾ ರೀತಿ ಸೌಲಭ್ಯ ಕಲ್ಪಿಸುವ ಜೊತೆಗೆ ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸಲು ಕಾರ್ಪೊರೇಟ್  ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ. ನೀವು ಸಹಕಾರ ನೀಡಿ ಎಂದು ಪರಮೇಶ್ವರ್ ಅವರು ಮಾಡಿದ ಮನವಿಗೆ ಸ್ಪಂದಿಸಿದ ಸುಧಾ ಮೂರ್ತಿ ಅವರು, ಸರ್ಕಾರ ಜಾಗ ಮತ್ತು ವಿದ್ಯುತ್ ಸೌಲಭ್ಯ ಒದಗಿಸಿದರೆ ನಾವು ಸಹ ನೆರವಾಗಲು ಸಿದ್ಧ ಎಂದರು.

ಈಗಾಗಲೇ ಕೋನಪ್ಪನ ಆಗ್ರಹಾರದಲ್ಲಿ ಇನ್ಫೋಸಿಸ್‍ನಿಂದ ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಇದೇ 19ರಂದು ಕಾರ್ಯಕ್ರಮವಿದೆ. ಮೈಸೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಜಾಗ ತೋರಿಸಿ, ನಾವು ಪೊಲೀಸರಿಗೆ ಮನೆ ನಿರ್ಮಿಸಿಕೊಡುತ್ತೇವೆ. ಅದರೊಂದಿಗೆ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಿಕೊಡುತ್ತೇವೆ ಎಂದು ಹೇಳಿದರು.

ಎಲ್ಲೆಲ್ಲಿ ಅಗತ್ಯವಿದೆಯೋ ಅದನ್ನು ಪತ್ತೆ ಮಾಡಿ ತಿಳಿಸುತ್ತೇವೆ. ನಂತರ ವಸತಿ ಗೃಹ ಮತ್ತು ಠಾಣೆಗಳ ನಿರ್ಮಾಣ ಮಾಡಿ ಎಂದಾಗ, ಅದಕ್ಕೆ ಸುಧಾಮೂರ್ತಿ ಸಮ್ಮತಿ ಸೂಚಿಸಿದರು. ಎಲೆಕ್ಟ್ರಾನಿಕ್‍ಸಿಟಿಯಲ್ಲಿ 1ನೆ ಹಂತದ ಮೆಟ್ರೋ ನಿರ್ಮಾಣದ ಬಗ್ಗೆ ನೀಲಿ ನಕ್ಷೆಯಯನ್ನು ನಗರಾಭಿವೃದ್ಧಿ ಸಚಿವರೂ ಆದ ಡಾ.ಜಿ.ಪರಮೇಶ್ವರ್ ಅವರಿಗೆ ಇದೇ ಸಂದರ್ಭದಲ್ಲಿ ನೀಡಿದರು.

ಅಂದೇ ಮೆಟ್ರೋ ನಿರ್ಮಾಣಕ್ಕೆ ನಿರ್ಮಾಣ ಒಪ್ಪಂದಕ್ಕೆ ಸಹಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಮೂರ್ತಿ, ಇದೇ 19ರಂದು ಇನ್ಫೋಸಿಸ್‍ನಿಂದ ನಿರ್ಮಾಣ ಮಾಡಲಾಗುತ್ತಿರುವ ಕೋನಪ್ಪನ ಅಗ್ರಹಾರದ ಮೆಟ್ರೋ ನಿಲ್ದಾಣ ಕಾರ್ಯಕ್ರಮದಲ್ಲಿ ಅದಕ್ಕೆ ಎಷ್ಟು ವೆಚ್ಚ ಎಂದು ತಿಳಿಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಾನು ಈಗ ಏನೂ ಹೇಳಲು ಆಗುವುದಿಲ್ಲ. ಮುಖ್ಯಮಂತ್ರಿಗಳೇ ಹೇಳುತ್ತಾರೆ. ಎಷ್ಟು ಕೋಟಿ ಹಣ ಇದಕ್ಕಾಗ ವೆಚ್ಚವಾಗುತ್ತದೆ ಎಂಬುದು ಅಂದೇ ತಿಳಿಯುತ್ತದೆ ಎಂದರು.

Facebook Comments

Sri Raghav

Admin