ಕಚೇರಿ ಕ್ಲೀನ್ ಮಾಡಿಕೊಂಡು ವಕೀಲ ವೃತ್ತಿಗೆ ಮರಳಿದ ಕಿಮ್ಮನೆ

ಈ ಸುದ್ದಿಯನ್ನು ಶೇರ್ ಮಾಡಿ

Kimmane

ಬೆಂಗಳೂರು, ಜು.16- ತೀರ್ಥಹಳ್ಳಿ ಕ್ಷೇತ್ರದ ಜನರು ಕಿಮ್ಮನೆ ರತ್ನಾಕರ್ ಅವರನ್ನು ಎರಡು ಅವಧಿಗೆ ಆಯ್ಕೆ ಮಾಡಿದಾಗ ಅವರು ಮಾಡುತ್ತಿದ್ದ ತಮ್ಮ ವಕೀಲ ವೃತ್ತಿಯನ್ನು ಬಿಟ್ಟು, ಜನ ಸೇವೆ ಹಾಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು.  2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಗೆದ್ದರೆ ವಿಧಾನಸಭೆಗೆ ಹೋಗುತ್ತೇನೆ. ಸೋತರೆ ವಕೀಲ ವೃತ್ತಿ ಮಾಡುತ್ತೇನೆ ಎಂದೇ ಹೇಳುತ್ತಿದ್ದರು. ಅದೇ ಮಾತಿನಂತೆ ತಮ್ಮ ವಕೀಲ ವೃತ್ತಿಯನ್ನು ಮುಂದುವರೆಸುವ ಸಲುವಾಗಿ ಕಚೇರಿಯನ್ನು ಸ್ವತಃ ಅವರೇ ಶುಚಿಗೊಳಿಸಿದರು.ಇದೇ ವಿಶೇಷ. ಒಮ್ಮೆ ಶಾಸಕರಾದವರು ಏನೇನೋ ಆಗುತ್ತಾರೆ, ಆಗಿದ್ದಾರೆ. ಆದರೆ, ಕಿಮ್ಮನೆ ಅವರು ರಾಜಕೀಯವನ್ನೇ ನಂಬಿ ಜೀವನವನ್ನು ಮಾಡಲಿಲ್ಲ. ಇದ್ದಿದ್ದನ್ನು ಕಳೆದುಕೊಂಡು ರಾಜಕೀಯ ಮಾಡಿದ ಉದಾಹರಣೆ ಅವರದು ಅಷ್ಟು ಶುದ್ಧ ಹಸ್ತರು.

ರಾಜಯಕೀಯಕ್ಕೆ ಬಂದು ಅವರು ಗಳಿಸಿದ್ದು ಸಂಪತ್ತಲ್ಲ. ಜನರ ಪ್ರೀತಿ. ಜನರು ತಮ್ಮ ಕೈ ಹಿಡಿಯಲಿಲ್ಲ ಎಂದು ಅವರು ಬೇಸರಗೊಳ್ಳಲಿಲ್ಲ. ತಮ್ಮ ಹಿಂದಿನ ವಕೀಲ ವೃತ್ತಿಗೆ ಮರಳಿದರು, ತಮ್ಮ ಹಳೆಯ ಕಚೇರಿಯನ್ನು ತಾವೇ ಶುಚಿ ಮಾಡಿಕೊಂಡು ವಕೀಲ ವೃತ್ತಿಯನ್ನು ಪ್ರಾರಂಭಿಸಿದ್ದಾರೆ. ಸದಾ ನಗುಮುಖ, ಬಡವರ ಬಗ್ಗೆ ತುಡಿತ, ನೋವಿಗೆ ಸ್ಪಂದಿಸುವ ಕಾಳಜಿ ಅವರದು, ಅಧಿಕಾರದಲ್ಲಿದ್ದಾಗಲೂ ಇದನ್ನು ಅವರು ಮಾಡಿದ್ದರು. ಅಧಿ ಕಾರದಿಂದ ಕೆಳಕ್ಕಿಳಿದಾಗಲೂ ಇದನ್ನೇ ಅವರು ಮುಂದುವರೆಸುತ್ತಿದ್ದಾರೆ. ಅವರ ಸ್ಪಷ್ಟತೆ ಹಾಗೂ ಪ್ರಮಾಣಿಕತೆಯನ್ನು ಈ ಮೂಲಕ ಕಾಣಬಹುದಾಗಿದೆ.

Facebook Comments

Sri Raghav

Admin