ಕಿರಣ್‍ಬೇಡಿ-ಫುಟ್ಬಾಲ್ ಅಭಿಮಾನಿಗಳ ನಡುವೆ ಟ್ವೀಟ್ ವಾರ್

ಈ ಸುದ್ದಿಯನ್ನು ಶೇರ್ ಮಾಡಿ

Kiran-Bedi

ಪುದುಚೇರಿ, ಜು. 16- ರಷ್ಯಾ ಮಹಾನಗರಿಯಲ್ಲಿ ಫ್ರಾನ್ಸ್ ತಂಡವು ಕ್ರೋವೇಷ್ಯಾದ ವಿರುದ್ಧ 4-2 ಗೋಲುಗಳಿಂದ ಜಯ ಸಾಧಿಸುತ್ತಿದ್ದಂತೆ ಫ್ರಾನ್ಸ್ ಸೇರಿದಂತೆ ಹಲವು ಕಡೆಗಳಲ್ಲಿ ವಿಜಯೋತ್ಸ ವವನ್ನು ಆಚರಿಸಿಕೊಂಡಿದ್ದಾರೆ. ಭಾರತದ ಪುದುಚೇರಿಯಲ್ಲೂ ಫ್ರಾನ್ಸ್ ತಂಡದ ಅಭಿಮಾನಿಗಳು ಕೂಡ ರಸ್ತೆಗಿಳಿದು ಸಂಭ್ರಮ ಪಟ್ಟಿದ್ದಾರೆ. ಅಭಿಮಾನಿಗಳ ಈ ವರ್ತನೆಯನ್ನು ಪುದುಚೇರಿಯ ಲೆಫ್ಟಿನೆಂಟ್ ಗೌರ್ನರ್ ಆಗಿರುವ ಕಿರಣ್ ಬೇಡಿ ಅವರು ತಮ್ಮ ಟ್ವಿಟ್ಟರ್‍ನಲ್ಲಿ ಟೀಕಿಸಿದ್ದಾರೆ.

ವಿಶ್ವಫುಟ್ಬಾಲ್ ರಂಗದಲ್ಲಿ ನಮ್ಮ ಭಾರತ ದೇಶವು 97ನೆ ರ್ಯಾಂಕಿಂಗ್ ಪಡೆದು ಫಿಫಾ ವಿಶ್ವಕಪ್‍ನಂತಹ ಮಹತ್ತರ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಂಡಿರುವಾಗ ಈ ರೀತಿಯ ಸಂಭ್ರಮವನ್ನು ಆಚರಿಸಿಕೊಳ್ಳುವುದು ಸರಿಯೇ ಎಂದು ತಮ್ಮ ಟ್ವಿಟ್ಟರ್‍ನಲ್ಲಿ ಬರೆದಿದ್ದರು. ಕಿರಣ್ ಬೇಡಿಯವರ ಈ ಟ್ವಿಟ್ಟರ್‍ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ಇಂದು ಮತ್ತೆ ಕಿರಣ್ ಬೇಡಿಯವರು ಟ್ವಿಟ್ಟರ್‍ನಲ್ಲಿ ನೀಡಿದ್ದ ತಮ್ಮ ಹೇಳಿಕೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಪುದುಚೇರಿಯು, ಪಾಂಡಿಚೇರಿ ಆಗುವ ಮುನ್ನ 1962ರಲ್ಲಿ ಫ್ರಾನ್ಸ್‍ನ ಒಂದು ಪುಟ್ಟ ಕಾಲೋನಿಯಾಗಿತ್ತು (ವಸಾಹತು), ಆದ್ದರಿಂದ ಅಲ್ಲಿ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರಷ್ಟೇ ಎಂದು ತಮ್ಮ ಹೇಳಿಕೆ ನೀಡಿದ್ದಾರೆ.

Facebook Comments

Sri Raghav

Admin