ವಿಶ್ವಕಪ್ ಫುಟ್ಬಾಲ್ ವೇಳೆ ರಷ್ಯಾ ಮೇಲೆ 25 ದಶಲಕ್ಷ ಸೈಬರ್ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

Putin Russia

ಮಾಸ್ಕೋ, ಜು.16-ರಷ್ಯಾದಲ್ಲಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ವೇಳೆ ದೇಶದ ಮೇಲೆ ಬಹುತೇಕ 25 ದಶಲಕ್ಷ ಸೈಬರ್ ದಾಳಿಗಳು ನಡೆದಿವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ವತ: ಈ ಆತಂಕಕಾರಿ ವಿದ್ಯಮಾನವನ್ನು ಬಹಿರಂಗಗೊಳಿಸಿದ್ದಾರೆ. ಈ ಸೈಬರ್ ಆಕ್ರಮಣದ ಹಿಂದೆ ಯಾರಿದ್ದಾರೆ ಎಂಬುದನ್ನು ಪುಟಿನ್ ಸ್ಪಷ್ಟವಾಗಿ ಹೇಳಿಲ್ಲವಾದರೂ ಅನುಮಾನದ ಮುಳ್ಳು ಅಮೆರಿಕಾದತ್ತ ನೆಟ್ಟಿದೆ.

ವಿಶ್ವಕಪ್ ವೇಳೆ ಬಹುತೇಕ 25 ಮಿಲಿಯನ್ ಸೈಬರ್ ಅಟ್ಯಾಕ್‍ಗಳು ನಡೆದಿವೆ ಹಾಗೂ ರಷ್ಯಾದಲ್ಲಿ ವಿಶ್ವಕಪ್‍ಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧಿಸಿದ ಮಾಹಿತಿ ಘಟಕಗಳ ಮೇಲೆ ಸೈಬರ್ ಮತ್ತು ಇತರ ಅಪರಾಧ ಕೃತ್ಯಗಳು ನಡೆದಿವೆ ಎಂದು ಪುಟಿನ್ ಭದ್ರತಾ ಸೇವೆಗಳೊಂದಿಗೆ ನಿನ್ನೆ ಸಭೆ ವೇಳೆ ಈ ವಿಷಯ ತಿಳಿಸಿದರು.

Facebook Comments

Sri Raghav

Admin