ಡೀಸೆಲ್ ಕದ್ದಿದ್ದಾರೆ ಎಂದು ಮೂವರನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಥಳಿಸಿದರು..!

ಈ ಸುದ್ದಿಯನ್ನು ಶೇರ್ ಮಾಡಿ

hit

ಭೋಪಾಲ್,ಜು.16-ಡೀಸೆಲ್ ಕದ್ದಿದ್ದಾರೆ ಎಂದು  ಆಪಾದಿಸಿ ಉದ್ಯಮಿಯೊಬ್ಬ ಮೂವರು ಬುಡಕಟ್ಟು ಜನಾಂಗದ ನೌಕರರನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಥಳಿಸಿದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.  ಮಂಡ್ಲಾ ಜಿಲ್ಲೆಯ ನಿವಾಸಿಗಳಾದ ಸುರೇಶ್ ಠಾಕೂರ್ (46), ಆಶಿಶ್ ಗೊಂಡ್ (24) ಮತ್ತು ಗೋಲು ಠಾಕೂರ್ (24) ನಗ್ನಗೊಳಿಸಲ್ಪಟ್ಟು, ಹಲ್ಲೆಗೊಳಗಾದ ಸಂತ್ರಸ್ತರು.  120 ಲೀಟರ್ ಡೀಸೆಲ್ ಕದ್ದಿದ್ದಾರೆ ಎಂದು ಆಪಾದಿಸಿ ಉದ್ಯಮಿ ಹಾಗೂ ಈತನ ಸ್ನೇಹಿತರು, ಈ ಮೂವರು ನೌಕರರನ್ನು ನಗ್ನಗೊಳಿಸಿ ಬೇಸ್‍ಬಾಲ್ ಬ್ಯಾಟ್‍ನಿಂದ ಥಳಿಸಿದ್ದಾರೆ.  ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಾರಣ ಪೊಲೀಸರು ಸ್ವಯಂ ಪ್ರೇರಿತ ಕ್ರಮ ಕೈಗೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin