6 ದಿನ ತಿರುಪತಿ ದೇಗುಲ ಮುಚ್ಚುವ ಟಿಟಿಡಿ ನಿರ್ಧಾರಕ್ಕೆ ಆಂಧ್ರ ಸಿಎಂ ನಾಯ್ಡು ಆಕ್ಷೇಪ

ಈ ಸುದ್ದಿಯನ್ನು ಶೇರ್ ಮಾಡಿ

Chandrababu-Naidu
ಹೈದರಾಬಾದ್, ಜು.17- ಸಂಪ್ರೋಕ್ಷಣೆ  ಕೈಂಕರ್ಯ ನೆರವೇರಿಸುವ ಉದ್ದೇಶದಿಂದ ಆ.11ರಿಂದ 6 ದಿನಗಳ ಕಾಲ ವಿಶ್ವ ವಿಖ್ಯಾತ ತಿರುಪತಿ ದೇವಸ್ಥಾನ ಮುಚ್ಚುವ ಟಿಟಿಡಿ ನಿರ್ಧಾರಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಪ್ರೋಕ್ಷಣೆ  ಹೆಸರಿನಲ್ಲಿ ಭಕ್ತರಿಗೆ ಯಾವುದೇ ಕಾರಣಕ್ಕೂ ತೊಂದರೆ ನೀಡುವುದು ಬೇಡ. ದೇವಸ್ಥಾನವನ್ನು ಮುಚ್ಚದೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವಂತೆ ಅವರು ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ.

ಆಗಮ ಶಾಸ್ತ್ರದ ಪ್ರಕಾರ ಸಂಪ್ರೋಕ್ಷಣೆ  ಕೈಂಕರ್ಯ ನೆರವೇರಿಸಬೇಕು. ಭಕ್ತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ದೂರದ ಪ್ರದೇಶಗಳಿಂದ ವೆಂಕಟೇಶ್ವರನ ದರ್ಶನಕ್ಕೆ ಸಹಸ್ರಾರು ಮಂದಿ ಆಗಮಿಸುತ್ತಾರೆ. ಅವರಿಗೆ ಸಂಪ್ರೋಕ್ಷಣೆ  ಕೈಂಕರ್ಯದಿಂದ ತೊಂದರೆಯಾಗುವುದು ಬೇಡ ಎಂದು ಅವರು ಸಲಹೆ ಮಾಡಿದ್ದಾರೆ.

Facebook Comments

Sri Raghav

Admin