ಬ್ಲೂಫಿಲಂ ನೋಡಿ ಕಾಮೋದ್ರಿಕ್ತರಾಗಿ ಬಾಲಕಿಯ ಗ್ಯಾಂಗ್ ರೇಪ್ ಮಾಡಿದ ಐವರು ಬಾಲಕರು.!

ಈ ಸುದ್ದಿಯನ್ನು ಶೇರ್ ಮಾಡಿ

Porn-Sex-Videp-Phone
ಡೆಹ್ರಾಡೂನ್, ಜು.17-ಮೊಬೈಲ್ ಫೋನ್‍ನಲ್ಲಿ ಅಶ್ಲೀಲ ಸಿನಿಮಾ ನೋಡಿದ ನಂತರ ಐವರು ಬಾಲಕರು 8 ವರ್ಷದ ಬಾಲೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಹೀನ ಘಟನೆ ಉತ್ತರಾಖಂಡದ ವಿಶ್ವವಿಖ್ಯಾತ ಗಿರಿಧಾಮ ಡೆಹ್ರಾಡೂನ್‍ನ ಸಹಸ್‍ಪುರ್‍ನಲ್ಲಿ ನಡೆದಿದೆ. ಸ್ಮಾರ್ಟ್‍ಫೋನ್ ಮತ್ತು ಅಶ್ಲೀಲ ಸಿನಿಮಾಗಳಿಂದ ಸಮಾಜದಲ್ಲಿ ಏನೆಲ್ಲ ಹೀನ ಕೃತ್ಯಗಳು ನಡೆಯುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. 9 ರಿಂದ 14 ವರ್ಷದ ಬಾಲಕರು ಈ ನೀಚ ಕೃತ್ಯ ಎಸಗಿದ್ದು, ಘಟನೆಯಿಂದ ಜನರು ಬೆಚ್ಚಿ ಬೀಳುವಂತಾಗಿದೆ.

ಈ ಎಲ್ಲ ಐವರು ಬಾಲಕರನ್ನು ವಶಕ್ಕೆ ತೆಗೆದುಕೊಂಡು ರಿಮ್ಯಾಂಡ್ ಹೋಮ್‍ಗೆ ಕಳುಹಿಸಲಾಗಿದೆ.  ಬಾಲಕನೊಬ್ಬನ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಈ ಐವರು ಮೊಬೈಲ್ ಫೋನ್‍ನಲ್ಲಿ ಬ್ಲೂ ಫಿಲಂ ನೋಡಿದರು. ನಂತರ ಪಕ್ಕದ ಮನೆಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕಿಯನ್ನು ಮನೆಯೊಳಗೆ ಕರೆ ತಂದು ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಮಾರ್ಟ್ ಫೋನ್‍ನ ಇಂಟರ್‍ನೆಟ್‍ನಲ್ಲಿ ಆಗಾಗ ಅಶ್ಲೀಲ ಚಿತ್ರಗಳನ್ನು ನೋಡುವ ದುಶ್ಚಟ ಹೊಂದಿದ್ದ ಈ ಬಾಲಕರು ಕೆಲವು ದಿನಗಳ ಹಿಂದೆಯ ಇಂಥ ಕೃತ್ಯ ನಡೆಸಲು ಉದ್ದೇಶಿ ಸಮಯಕ್ಕಾಗಿ ಕಾಯುತ್ತಿದ್ದರು. ಪಕ್ಕದ ಮನೆಯ ಬಾಲಕಿ ಮೇಲೆ ಇವರ ವಕ್ರದೃಷ್ಟಿ ಬಿದ್ದು, ಈ ಘಟನೆ ನಡೆದಿದೆ ಎಂದು ಸಹಸ್‍ಪುರ್ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ನರೇಶ್ ರಾಥೋಡ್ ತಿಳಿಸಿದ್ದಾರೆ. ತನ್ನ ಮೇಲೆ ನಡೆದ ಕೃತ್ಯವನ್ನು ಬಾಲಕಿಯು ಪೋಷಕರಿಗೆ ತಿಳಿಸಿದ ನಂತರ ದೂರನ್ನು ಆಧರಿಸಿ ಐವರನ್ನು ಬಂಧಿಸಿ ಪೋಕ್ಸೊ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin