ಸ್ಮಾರ್ಟ್ ಫೋನ್‍ಗಾಗಿ ಸ್ನೇಹಿತನನ್ನೇ ಕೊಂದು ಸುಟ್ಟುಹಾಕಿದ್ದವನ ಸೆರೆ..!

ಈ ಸುದ್ದಿಯನ್ನು ಶೇರ್ ಮಾಡಿ

Smart-Phone

ಹೈದರಾಬಾದ್, ಜು.17-ಸ್ಮಾರ್ಟ್ ಫೋನ್‍ಗಾಗಿ ತನ್ನ ಗೆಳೆಯನನ್ನೇ ಕೊಂದು ಸುಟ್ಟು ಹಾಕಿದ ಆರೋಪದ ಮೇಲೆ ಹೈದರಾಬಾದ್ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.   ಪ್ರೇಮ್ ಸಾಗರ್(19) ಬಂಧಿತ ಹಂತಕ. ಈತ ನೆರೆಮನೆಯ ಸ್ನೇಹಿತ 17 ವರ್ಷ ಪ್ರೇಮ್ ಎಂಬ ಅಪ್ರಾಪ್ತನನ್ನು ಮೊಬೈಲ್ ಫೋನ್‍ ವಿಚಾರವಾಗಿ ಕೊಂದು ಸುಟ್ಟು ಹಾಕಿದ ಆರೋಪಗೆ ಗುರಿಯಾಗಿದ್ದಾನೆ.

ಘಟನೆ ವಿವರ :

ಮೋಟಾರ್ ಸೈಕಲ್‍ನಲ್ಲಿ ಪ್ರೇಮ್‍ನನ್ನು ಹೈದರಾಬಾದ್‍ನ ಉಪ್ಪಳ ಪ್ರದೇಶದಿಂದ ಲಾಂಗ್ ಡ್ರೈವ್ ಹೋಗೋಣ ಎಂದು ಹೇಳಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಆರೋಪಿಯು ಮರದ ರಂಬೆಯಿಂದ ಪ್ರೇಮ್ ತಲೆಗೆ ಬಲವಾಗಿ ಹೊಡೆದು ಕೊಂದು ಹಾಕಿದ. ನಂತರ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿ ಅಲ್ಲಿಂದ ಪರಾರಿಯಾದ.  ಪ್ರೇಮ್ ಕಾಣೆಯಾದ ಕಾರಣ ಗಾಬರಿಯಾದ ಪೋಷಕರು ಪೊಲೀಸರಿಗೆ ದೂರು ನೀಡಿದರು. ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಪ್ರೇಮ್ ಸಾಗರ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರು. ಸ್ಮಾರ್ಟ್ ಫೋನ್ ನೀಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ತಪೊ್ಪಪ್ಪಿಕೊಂಡಿದ್ದಾನೆ.

Facebook Comments

Sri Raghav

Admin