ನಮ್ಮದು 132 ಕೋಟಿ ಭಾರತೀಯರ ಪಕ್ಷ : ರಾಹುಲ್ ಗಾಂಧಿ

ಈ ಸುದ್ದಿಯನ್ನು ಶೇರ್ ಮಾಡಿ

Rahul-Gandhi--01

ನವದೆಹಲಿ, ಜು.17-ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂಬ ಬಿಜೆಪಿ ಟೀಕೆಗೆ ಕೊನೆಗೂ ಮೌನ ಮುರಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷವು 132 ಕೋಟಿ ಭಾರತೀಯರ ಪಕ್ಷ ಎಂದು ಹೇಳಿದ್ದಾರೆ.  ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಸಮಾಜದ ಕಟ್ಟಕಡೆಯ ವ್ಯಕ್ತಿಯೊಂದಿಗೆ ನಿಲ್ಲುತ್ತೇನೆ. ಅವರಿಗೆ ನಾನು ಧೈರ್ಯ ತುಂಬಿ ನೈತಿಕ ಬೆಂಬಲ ನೀಡುತ್ತೇನೆ. ದ್ವೇಷ ರಾಜಕಾರಣ ಮತ್ತು ಭಯದ ವಾತಾವರಣವನ್ನು ನಾನು ನಿರ್ಮೂಲನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಯಾವುದೇ ಜÁತಿ, ಧರ್ಮ ಅಥವಾ ಮತ-ಪಂಥಗಳು ನನಗೆ ಮುಖ್ಯವಲ್ಲ. ಶೋಷಣೆ ಮತ್ತು ತುಳಿತಕ್ಕೆ ಒಳಗಾದ ಮತ್ತು ಸಮಾಜದ ದುರ್ಬಲ ವರ್ಗಗಳ ವಿರುದ್ಧ ನಾನು ಸದಾ ಧ್ವನಿ ಎತ್ತುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.

Facebook Comments

Sri Raghav

Admin