ಭಾರೀ ಬಿರುಗಾಳಿಗೆ ಮುರಿದ ಹೋದ ಟರ್ಬೈನ್ ರೆಕ್ಕೆಗಳು

ಈ ಸುದ್ದಿಯನ್ನು ಶೇರ್ ಮಾಡಿ

wind-turbine
ಚಿತ್ರದುರ್ಗ, ಜು.17-ಕೋಟೆ ನಾಡಿನಲ್ಲಿ ನಿನ್ನೆ ಅಬ್ಬರಿಸಿದ ಭಾರೀ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ನಿನ್ನೆ ಸಂಜೆ ಭಾರೀ ಗಾಳಿಯಿಂದ ಕುರುಮರಡಿಕೆರೆ ಗಿರಿಧಾಮದಲ್ಲಿ ಅಳವಡಿಸಲಾಗಿದ್ದ ಗಾಳಿ ಯಂತ್ರದ ರೆಕ್ಕೆಗಳು ಸಂಪೂರ್ಣ ಜಖಂಗೊಂಡಿವೆ. ಗಾಳಿ ಬೀಸುವ ಯಂತ್ರಗಳೇ ಗಾಳಿಯ ರಭಸಕ್ಕೆ ಹಾಳಾಗಿವೆ ಎಂದರೆ ಇನ್ನೆಷ್ಟರ ಮಟ್ಟಿಗೆ ಗಾಳಿ ತೀವ್ರತೆ ಇರಬಹುದು ಎಂದು ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದಾರೆ. ಇನ್ನು ಹಲವೆಡೆ ಮನೆಯ ಛಾವಣಿಗಳು ಹಾರಿ ಹೋಗಿದ್ದು, ಮರಗಳು ಧರೆಗುರುಳಿ ಬಿದ್ದಿವೆ. ಒಟ್ಟಿನಲ್ಲಿ ಮಳೆ ಕಡಿಮೆಯಾದರೂ ಗಾಳಿ ರಭಸಕ್ಕೆ ಅಪಾರ ನಷ್ಟ ಸಂಬವಿಸಿದೆ.

Facebook Comments

Sri Raghav

Admin