ನಮ್ಮಲ್ಲಿನ ಸುಗ್ಗಿ-ಸಂಕ್ರಾಂತಿಯಂತೆ ವಿದೇಶದಲ್ಲೂ ಇದೆ ಸ್ಟೋನ್ ಹೆಂಜ್ ಉತ್ಸವ..!

ಈ ಸುದ್ದಿಯನ್ನು ಶೇರ್ ಮಾಡಿ

ds

ನಮ್ಮಲ್ಲಿ ಆಚರಿಸುವ ಸುಗ್ಗಿ-ಸಂಕ್ರಾಂತಿ ಹಬ್ಬಗಳಂತೆ ವಿದೇಶಗಳಲ್ಲೂ ಇಂಥ ಸಂಪ್ರದಾಯ ಜಾರಿಯಲ್ಲಿದೆ. ಬ್ರಟನ್‍ನಲ್ಲೂ ಬೇಸಿಗೆ ಉತ್ಸವವನ್ನು ನಮ್ಮ ಸಂಕ್ರಾಂತಿ ಮಾದರಿಯಲ್ಲಿ ಆಚರಿಸಲಾಗುತ್ತದೆ. ಸಹಸ್ರಾರು ಮಂದಿ ಸಡಗರ-ಸಂಭ್ರಮದಿಂದ ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ.  ಇಂಗ್ಲೆಂಡ್‍ನ ಪ್ರಾಚೀನ ಸ್ಮಾರಕ ಸ್ಟೋನ್‍ಹೆಂಜ್ ವಿಶ್ವ ಪಾರಂಪರಿಕಾ ತಾಣವಾಗಿ ಯುನೆಸ್ಕೋದಿಂದ ಮಾನ್ಯತೆ ಪಡೆದಿದೆ. ಈ ಜಗದ್ವಿಖ್ಯಾತ ಪ್ರವಾಸಿ ತಾಣ ವಿವಿಧ ಸಾಂಪ್ರದಾಯಿಕ ಆಚರಣೆಗಳಿಗೂ ಪ್ರಸಿದ್ದ. ಇವುಗಳಲ್ಲಿ ಸಮರ್ ಸೊಲ್ಸ್ ಟೈಸ್ ಎಂಬ ಬೇಸಿಗೆ ಉತ್ಸವವೂ ಜನಪ್ರಿಯ. ಇದನ್ನು ಸುಗ್ಗಿ-ಸಂಕ್ರಾಂತಿಗೆ ಹೋಲಿಸಬಹುದು.

ds-1

ಇಂಗ್ಲೆಂಡ್‍ನ ವಿಲ್ಟ್‍ಶೈರ್‍ನಲ್ಲಿರುವ ಶಿಲಾ ರಾಶಿಗಳಿಂದಾಗಿ ಸ್ಟೋನ್‍ಹೆಂಜ್ ತಾಣ ವಲ್ರ್ಟ್ ಹೆರಿಟೇಜ್ ಸೈಟ್ ಎಂದೇ ಪ್ರಖ್ಯಾತಿ ಪಡೆದಿದೆ. ಇಲ್ಲಿ ವರ್ಷದ ಸುದೀರ್ಘ ದಿನವನ್ನು ಬೇಸಿಗೆ ಉತ್ಸವದ ವಿಶಿಷ್ಟ ದಿನವನ್ನಾಗಿ ಆಚರಿಸಲಾಗುತ್ತದೆ. ಮುಂಜಾನೆಯೇ ಇಲ್ಲಿ ಸಹಸ್ರಾರು ಮಂದಿ ಜಮಾಯಿಸಿ ಸೂರ್ಯೋದಯವನ್ನು ವೀಕ್ಷಿಸುತ್ತಾರೆ. ಸೂರ್ಯ ಉದಯವಾಗುತ್ತಿದ್ದಂತೆ ವಿಗ್ರಹಾರಾಧಕರು, ಕ್ಷುದ್ರ ಧರ್ಮಿಯರು, ಸ್ಥಳೀಯ ಬುಡ ಕಟ್ಟು ಜನಾಂಗದವರು, ಹಾಗೂ ಪ್ರವಾಸಿಗರು ಜಾ್ಞನೋದಯದ ಸಂಕೇತ ಎಂಬಂತೆ ಸಡಗರ-ಸಂಭ್ರಮದಿಂದ ಉಲ್ಲಸಿತರಾಗುತ್ತಾರೆ.

ds-3

Facebook Comments

Sri Raghav

Admin