ಬೆಳೆಯ ಮಧ್ಯದಲ್ಲಿ ಅಕ್ರಮವಾಗಿ ಗಾಂಜಾ ಸಿಕ್ಕಿಬಿದ್ದ ವ್ಯಕ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Ganja--01
ಕೊಳ್ಳೇಗಾಲ, ಜು.17- ಬೆಳೆಯ ಮಧ್ಯದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಸತ್ತೇಗಾಲ ಸಮೀಪದ ಚನ್ನಿಪುರದೊಡ್ಡಿ ಗ್ರಾಮದ ಉಮೇಶ್(42) ಎಂಬಾತ ಬಂಧಿತ ಆರೋಪಿ. ಈತ ಗ್ರಾಮದ ಮನೆಯ ಬಳಿ ಇದ್ದ ಜಮೀನಿನಲ್ಲಿ ಬಾಳೆಗಿಡಗಳ ಮಧ್ಯದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ.

ಖಚಿತ ಮಾಹಿತಿ ಮೇರೆಗೆ ಡಿವೈಎಸ್‍ಪಿ ಪುಟ್ಟಮಾದಯ್ಯ ಮಾರ್ಗದರ್ಶನದಲ್ಲಿ ಗ್ರಾಮಾಂತರ ಪೊಲೀಸ್ ಠಾಣಾ ಸಬ್‍ಇನ್ಸ್‍ಪೆಕ್ಟರ್ ವನರಾಜು ಹಾಗೂ ಅವರ ತಂಡ ದಿಢೀರ್ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಸುಮಾರು 20 ಕೆ.ಜಿ.ಯ ಗಾಂಜಾ ಗಿಡವನ್ನು ವಶಪಡಿಕೊಂಡಿದ್ದಾರೆ. ದಾಳಿಯಲ್ಲಿ ಹೆಚ್.ಸಿ. ಮಧು, ನಾಗೇಂದ್ರ ಅರಸ್, ನಾಗರಾಜು, ರವಿಕುಮಾರ್, ಶಂಕರ್‍ಮೂರ್ತಿ, ಮಹೇಂದ್ರ ಹಾಗೂ ಇನ್ನೀತರರು ಇದ್ದರು.

Facebook Comments

Sri Raghav

Admin