ಸ್ನೇಹಿತರೊಂದಿಗೆ ಚಾಲೆಂಜ್ ಮಾಡಿ ಹೇಮಾವತಿ ನದಿಗೆ ಹಾರಿ ಕೊಚ್ಚಿಹೋದ ಯುವಕ

ಈ ಸುದ್ದಿಯನ್ನು ಶೇರ್ ಮಾಡಿ

Jump-Man
ಕೆಆರ್ ಪೇಟೆ, ಜು.18- ತುಂಬಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಈಜುವ ವಿಷಯದಲ್ಲಿ ಸವಾಲು ಹಾಕಿಕೊಂಡು ಈಜಲು ಹೋದ ಯುವಕನೋರ್ವ ನದಿ ಪಾಲಾಗಿರುವ ಘಟನೆ ಕೆಆರ್ ಪೇಟೆಯಲ್ಲಿ ನಿನ್ನೆ ನಡೆದಿದೆ. ತಾಲೂಕಿನ ಹರಿಹರಪುರ ಸೇತುವೆ ಬಳಿ ಈ ದುರ್ಘಟನೆ ನಡೆದಿದ್ದು, ನಿನ್ನೆ ಮಧ್ಯಾಹ್ನ ಸ್ನೇಹಿತರೊಂದಿಗೆ ನದಿಗೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

ಹರಿಹರಪುರ ಗ್ರಾಮದ ಶಿವು ಎಂಬವರ ಮಗ ಗಣೇಶ್ ನೀರುಪಾಲಾದ ಯುವಕ. ಸೇತುವೆ ಮೇಲಿಂದ ನದಿಗೆ ಹಾರಿ ಈಜುವುದಾಗಿ ಸ್ನೇಹಿತರಲ್ಲಿ ಶಿವು ಸವಾಲು ಹಾಕಿದ್ದು, ಅದರಂತೆ ಶಿವು ನೀರಿಗೆ ಹಾರಿ ಈಜಲು ಪ್ರಯತ್ನಿಸಿದ್ದಾನೆ. ಆದರೆ, ನೀರಿನ ಹರಿವಿನ ಪ್ರವಾಹ ತೀವ್ರವಾಗಿ ಇದ್ದುದರಿಂದ ಶಿವು ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಓರ್ವ ಸ್ನೇಹಿತ ಸೇತುವೆ ಮೇಲಿಂದ ಈ ದೃಶ್ಯವನ್ನು ಮೊಬೈಲ್ ಮೂಲಕ ಸೆರೆಹಿಡಿದಿದ್ದಾನೆ.

ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹದ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ತಹಶೀಲ್ದಾರ್ ಶಿವಮೂರ್ತಿ ಕೂಡ ಮೊಕ್ಕಾಂ ಹೂಡಿದ್ದಾರೆ. ಮೃತ ಶಿವುಗೆ ಒಂದು ಗಂಡು ಮತ್ತು ಮತ್ತೊಂದು ಹೆಣ್ಣು ಮಗುವಿದೆ. ಸಂತ್ರಸ್ತ ಕುಟುಂಬದ ಆಕ್ರಂಧನ ಮುಗಿಲುಮುಟ್ಟಿತ್ತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin