ಸಂತಾನಹರಣ ಶಸ್ತ್ರಚಿಕಿತ್ಸೆಗೊಗಿದ್ದ ಮಹಿಳೆಯರಿಗೆ ನೆಲದ ಮೇಲೆಯೇ ಮಲಗಿಸಿ ಚಿಕಿತ್ಸೆ..!

ಈ ಸುದ್ದಿಯನ್ನು ಶೇರ್ ಮಾಡಿ

Chitradurger--01

ಚಿತ್ರದುರ್ಗ,ಜು.18- ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯರಿಗೆ ಹಾಸಿಗೆ ಇಲ್ಲದೆ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ನೀಡಿರುವ ಪ್ರಸಂಗ ಪರಶುರಾಮಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.  ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಪರಶುರಾಮಪುರ ಆಸ್ಪತ್ರೆಗೆ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬರುತ್ತಾರೆ. ನಿನ್ನೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಆಯೋಜಿಸಲಾಗಿದ್ದು,20 ಮಹಿಳೆಯರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.

ಈ ವೇಳೆ ಇವರಿಗೆ ಮಲಗಲು ಹಾಸಿಗೆಯಿಲ್ಲದೆ ನೆಲದಲ್ಲಿ ಮಲಗುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಪುಟ್ಟ ಕಂದಮ್ಮಗಳನ್ನು ಜೊತೆಗೆ ಕರೆತಂದಿದ್ದ ಮಹಿಳೆಯ ಪೋಷಕರು ಆಸ್ಪತ್ರೆ ಆವರಣದಲ್ಲಿದ್ದ ಮರಕ್ಕೆ ಜೋಳಿಗೆ ಕಟ್ಟಿ ಸುಧಾರಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಮೂಲಭೂತ ಸೌಲಭ್ಯವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ಅಗತ್ಯವೇನಿತ್ತು. ನೆಲದ ಮೇಲೆ ಮಲಗಿದರೆ ಅವರ ಆರೋಗ್ಯದ ಗತಿಯೇನು ಎಂದು ಸಾರ್ವಜನಿಕರು ದೂರಿದ್ದಾರೆ.

Facebook Comments

Sri Raghav

Admin