ತಿರುವಣ್ಣಾಮಲೈನಲ್ಲಿ ರಷ್ಯಾ ಯುವತಿ ಮೇಲೆ 6 ಮಂದಿ ಕಾಮುಕರಿಂದ ಗ್ಯಾಂಗ್‍ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

GangRape--01

ಚೆನ್ನೈ/ತಿರುವಣ್ಣಾಮಲೈ, ಜು.18-ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೆಟ್ಟ ಹೆಸರಿನ ಕಳಂಕ ಅಂಟಿಕೊಂಡಿರುವಾಗಲೇ, ತಮಿಳುನಾಡಿನ ದೇವಾಲಯಗಳ ನಗರಿ ತಿರುವಣ್ಣಾಮಲೈನಲ್ಲಿ ರಷ್ಯಾ ಯುವತಿ ಮೇಲೆ ಕಾಮುಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.  ಈ ಹೀನ ಕೃತ್ಯದ ಸಂಬಂಧ ಆರು ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಭಾರತ ಪ್ರವಾಸದಲ್ಲಿದ್ದ 21 ವರ್ಷ ಯುವತಿಯನ್ನು ಆರು ಮಂದಿ ಅಪಾರ್ಟ್‍ಮೆಂಟ್ ಒಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದರು. ಪ್ರಜ್ಞಾಶೂನ್ಯರಾಗಿದ್ದ ಆಕೆಯನ್ನು ಆರೋಪಿಯೊಬ್ಬ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿತು.

ರಷ್ಯಾ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರ ಮೇಲೆ ಲೈಂಗಿಕ ದಾಳಿ ನಡೆದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಆಕೆಯ ಮುಖ, ಕೈಗಳ ಮೇಲೆ ಕಾಮುಕರು ಕಚ್ಚಿ ದೇಹವನ್ನು ಪರಚಿರುವ ಗಾಯಗಳಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.. ನಾನು ಆಕೆಯೊಂದಿಗೆ ತಿರುವಣ್ಣಾಮಲೈನಲ್ಲಿ ಪ್ರಸಿದ್ಧ ದೇವಾಲಯಗಳು ಮತ್ತು ಆಶ್ರಮಗಳಿಗೆ ಭೇಟಿ ನೀಡಿದೆ. ರಾತ್ರಿ ಆಕೆ ನನ್ನನ್ನು ಅಪಾರ್ಟ್‍ಮೆಂಟ್‍ನಲ್ಲಿ ಭೋಜನಕ್ಕೆ ಆಹ್ವಾನಿಸಿದ್ದರು. ಸಮ್ಮತಿಯಿಂದಲೇ ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದೆ. ನಂತರ ಆಕೆಗಾಗಿ ನಾನು ಹಣ್ಣುಗಳನ್ನು ತರಲು ಹೊರಹೋಗಿ ಹಿಂದಿರುಗಿದಾಗ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲು ನಾನು ಕರೆದೊಯ್ಯುತ್ತಿದ್ದೆ ಎಂದು ತನಿಖೆ ವೇಳೆ ಆರೋಪಿಯೊಬ್ಬ ಹೇಳಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಆಪಾರ್ಟ್‍ಮೆಂಟ್ ಮೇಲೆ ದಾಳಿ ನಡೆಸಿದ ಪೊಲೀಸರು ಇತರ ಐವರನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin