ದೇಶದಲ್ಲಿ 215 ಅಂಚೆ ಕಚೇರಿ ಪಾಸ್‍ಪೋರ್ಟ್ ಸೇವಾ ಕೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

Passport--01

ನವದೆಹಲಿ, ಜು.18- ಸಾಮಾನ್ಯ ಜನರ ಅನುಕೂಲಕ್ಕಾಗಿ ದೇಶದ ವಿವಿಧೆಡೆ 215 ಅಂಚೆ ಕಚೇರಿ ಪಾಸ್‍ಪೋರ್ಟ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಇಂದು ಮಾಹಿತಿ ನೀಡಿದೆ. ಪ್ರಶ್ನೋತ್ತರ ಕಲಾಪದಲ್ಲಿ ಈ ವಿಷಯ ತಿಳಿಸಿದ ಸಂಪರ್ಕ ಸಚಿವ ಮನೋಜ್ ಸಿನ್ಹ ಸಾರ್ವಜನಿಕರಿಗೆ ಸುಲಭವಾಗಿ ಪಾಸ್‍ಪೋರ್ಟ್ ಲಭಿಸುವಂತಾಗಲು ಕಳೆದ ನಾಲ್ಕು ವರ್ಷಗಳಿಂದ ಅಂಚೆ ಕಚೇರಿಗಳ ಮೂಲಕ ಪಾಸ್‍ಪೋರ್ಟ್ ಗಳನ್ನು ಒದಗಿಸುವ ಸೇವೆ ಚಾಲನೆಯಲ್ಲಿದೆ ಎಂದರು.

ದೇಶದ ವಿವಿಧೆಡೆ ಒಟ್ಟು 215 ಪೋಸ್ಟ್ ಆಫೀಸ್ ಪಾಸ್‍ಪೋರ್ಟ್ ಸರ್ವೀಸ್ ಸೆಂಟರ್‍ಗಳು ಕಾರ್ಯಾರಂಭ ಮಾಡುತ್ತಿವೆ ಎಂದು ಅವರು ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Facebook Comments

Sri Raghav

Admin