ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ರೋಡ್ ರೋಮಿಗಳು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Road-Romeos

ಹುಬ್ಬಳ್ಳಿ,ಜು.18-ಜನನಿಬಿಡ ಪ್ರದೇಶ ಹಾಗೂ ಶಾಲಾ ಕಾಲೇಜುಗಳ ಬಗ್ಗೆ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಆರು ಮಂದಿ ರೋಡ್ ರೋಮಿಯೋಗಳನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಗರದ ಹಳೇ ಬಸ್ ನಿಲ್ದಾಣ ಬಳಿ ಯುವತಿಯರನ್ನು ಹಾಗೂ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಶಿರಡಿನಗರದ ಸಂಜುಕುಮಾರ್, ತೊರವಿಹಕ್ಕಲ ಪ್ರವೀಣ್ ಜೈನ್, ಶಿರಾಜ್ ಅಹಮ್ಮದ್, ಶಂಕರ್ ತಲವಾಯಿ, ವಿವೇಕ ಗದಗಿ ಹಾಗೂ ವಿದ್ಯಾನಗರದ ಮಂಜುನಾಥ ಶಾಮನೂರು ಬಂಧಿತರು.

ಈ ಹಿಂದೆಯೂ ಸಹ ನಗರದ ವಿವಿಧ ಕಡೆ ಚನ್ನಮ್ಮ ಪಡೆಯ ಮಹಿಳಾ ಪೊಲೀಸ್ ಕಾನ್‍ಸ್ಟೇಬಲ್‍ಗಳು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಹಲವು ರೋಡ್ ರೋಮಿಯೋಗಳನ್ನು ಜೈಲಿಗೆ ಅಟ್ಟಿದ್ದರು.  ಇದೀಗ ಮತ್ತೆ ಇಂತಹ ಕಾರ್ಯಾಚರಣೆ ನಡೆಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಮಹಿಳಾ ಪೊಲೀಸ್ ಪಡೆ ಪಾತ್ರವಾಗಿದೆ.

Facebook Comments

Sri Raghav

Admin