ಸುಗಮ ಹಾಗೂ ಫ್ರಲಪ್ರದ ಕಲಾಪಕಾಗಿ ಪ್ರತಿಪಕ್ಷಗಳಲ್ಲಿ ಪ್ರಧಾನಿ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Modi--014

ನವದೆಹಲಿ, ಜು.18- ಸಂಸತ್‍ನ ಮುಂಗಾರು ಅಧಿವೇಶನದಲ್ಲಿ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಹ ಸುಗಮ ಹಾಗೂ ಫ್ರಲಪ್ರದ ಕಲಾಪ ನಡೆಯಬೇಕು ಎಂಬುದು ತಮ್ಮ ಅಪೇಕ್ಷೆಯಾಗಿದ್ದು, ಪಕ್ಷಾತೀತವಾಗಿ ಎಲ್ಲ ಸಂಸದರು ಸಹಕಾರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಸಂಸತ್‍ನ ಮುಂಗಾರು ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹಲವು ಕಡೆಗಳಲ್ಲಿ ಮುಂಗಾರು ಮಳೆಯಾಗುತ್ತಿದೆ. ಕೆಲವೆಡೆ ಅತಿವೃಷ್ಟಿ ಕೂಡ ಉಂಟಾಗಿದ್ದು, ಜನರು ನೆರವಿನ ನಿರೀಕ್ಷೆಯಲ್ಲಿ ಇದ್ದಾರೆ. ಇಂತಹ ಮಹತ್ವದ ವಿಚಾರಗಳ ಬಗ್ಗೆ ಗಂಭೀರ ಚರ್ಚೆಯಾಗಬೇಕು ಎಂದು ಅವರು ಹೇಳಿದರು.

ಸಂಸತ್‍ನಲ್ಲಿ ಪ್ರಸ್ತಾಪವಾಗುವ ಯಾವುದೇ ವಿಷಯದ ಬಗ್ಗೆಯೂ ಚರ್ಚೆ ನಡೆಸಲು ಸರ್ಕಾರ ಸಿದ್ಧವಿದೆ. ಈ ಬಾರಿಯ ಸಂಸತ್ ಕಲಾಪ, ಇತರ ರಾಜ್ಯಗಳ ವಿಧಾನಸಭೆಗಳ ಕಲಾಪಗಳಿಗೂ ಪ್ರೇರಣೆಯಾಗುವ ರೀತಿಯಲ್ಲಿ ಇರಲಿದೆ ಎಂಬ ವಿಶ್ವಾಸ ತಮಗಿದೆ ಎಂದು ಪ್ರಧಾನಿ ಹೇಳಿದರು. ಈ ಅಧಿವೇಶನ ದೇಶಕ್ಕೆ ಸರ್ವರೀತಿಯ ಉಪಯೋಗವಾಗುವ ರೀತಿಯಲ್ಲಿ ನಡೆಯಬೇಕು. ಉತ್ತಮ ಆಡಳಿದ ಮೂಲಕ ದೇಶವನ್ನು ಮುನ್ನಡೆಸಲು ವಿರೋಧ ಪಕ್ಷಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇಂದಿನಿಂದ ಆಗಸ್ಟ್ 10ರವರೆಗೆ ಸಂಸತ್‍ನ ಉಭಯ ಸದನಗಳ ಕಲಾಪ ನಡೆಯಲಿದ್ದು, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಕಾಶ್ಮೀರ ಸಮಸ್ಯೆ, ಗುಂಪು ಹತ್ಯೆ, ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳನ್ನು ಮುಂದಿಟ್ಟು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಜÁ್ಜಗಿವೆ. ಮಹಿಳಾ ಮೀಸಲಾತಿ ವಿಧೇಯಕಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಗುಂಪು ಹತ್ಯೆ ಬಗ್ಗೆ ಸಂಸತ್ ವಿಶೇಷ ಕಾನೂನು ರಚಿಸುವಂತೆ ನಿನ್ನೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ. ತ್ರಿವಳಿ ತಲಾಖ್ ಸೇರಿ 25ಕ್ಕೂ ಅಧಿಕ ವಿಧೇಯಕಗಳನ್ನು ಮಂಡಿಸಿ ಅನುಮೋದನೆ ಪಡೆಯಲು ಸರ್ಕಾರ ನಿರ್ಧರಿಸಿದೆ.

ಪ್ರತಿಜ್ಞಾವಿಧಿ ಸ್ವೀಕಾರ; ನೂತನವಾಗಿ ಸಂಸತ್‍ಗೆ ಆಯ್ಕೆಯಾದ ಸದಸ್ಯರು ಲೋಕಸಭೆಯಲ್ಲಿಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು. ದೇಶದ ವಿವಿಧ ಭಾಗಗಳಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಆಯ್ಕೆಯಾದ ಸಂಸತ್ ಸದಸ್ಯರು ಇಂದು ಕಲಾಪಕ್ಕೆ ಆಯ್ಕೆಯಾಗಿ ಪ್ರತಿಜ್ನಾವಿಧಿ ಸ್ವೀಕರಿಸಿದರು.

Facebook Comments

Sri Raghav

Admin