ಪೌರಕಾರ್ಮಿಕರಿಗೆ ಶೂ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Civic-Shooe

ಕೆ.ಆರ್.ಪುರ, ಜು.15- ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರಿಗೆ ಮುಂಜಾಗೃತೆ ಪರಿಕರಗಳನ್ನು ನೀಡುವ ಕೆಲಸ ಬಿಬಿಎಂಪಿ ಮಾಡಬೇಕು ಎಂದು ಕೆ.ಆರ್. ಪುರ ವಾರ್ಡ್ ಅಧ್ಯಕ್ಷ ಶಿವಪ್ಪ ತಿಳಿಸಿದರು. ಕೆ.ಆರ್.ಪುರದ ವೆಂಗಯ್ಯನ ಕೆರೆ ಬಳಿ ಕರಾವಳಿ ಜನಕೂಟದ ವತಿಯಿಂದ ಪೌರಕಾರ್ಮಿಕರಿಗೆ ಶೂಗಳನ್ನು ಆರೋಗ್ಯ ಅಧಿಕಾರಿ ಸಂಧ್ಯಾ ಅವರ ಮೂಲಕ ವಿತರಿಸಿ ಅವರು ಮಾತನಾಡಿದರು.

ತಮ್ಮ ಆರೋಗ್ಯವನ್ನು ಬದಿಗಿಟ್ಟು ಸಾರ್ವಜನಿಕರ ಆರೋಗ್ಯಕ್ಕಾಗಿ ದುಡಿಯುವ ಪೌರಕಾರ್ಮಿಕರ ಯೋಗಕ್ಷೇಮ ವಿಚಾರಿಸುವುದು ಬಿಬಿಎಂಪಿಯ ಕರ್ತವ್ಯ ಅಲ್ಲದೆ ಸಾರ್ವಜನಿಕರ ಕರ್ತವ್ಯವೂ ಆಗಿದೆ ಎಂದು ಹೇಳಿದರು. ಪೌರಕಾರ್ಮಿಕರಿಗೆ ಸರಿ ಯಾದ ಸಮಯಕ್ಕೆ ಆರೋಗ್ಯ ಶಿಬಿರಗಳನ್ನು ಮಾಡಬೇಕು. ಆರೋಗ್ಯ ಅಧಿಕಾರಿಯೂ ಪೌರ ಕಾರ್ಮಿಕರಿಗೆ ಸಮಯಕ್ಕೆ ವೇತನ ಬರುವಂತೆ ನೋಡಿಕೊಳ್ಳಬೇಕು ಅಲ್ಲದೆ, ಅವರಿಗೆ ಅವಶ್ಯಕತೆ ಇರುವ ಪರಿಕರ ಪಾಲಿಕೆಯಿಂದ ಸಿಗುವುದು ತಡವಾದರೆ ಸ್ಥಳೀಯ ಮುಖಂಡರಲ್ಲಿ ಮನವಿ ಮಾಡಿ ಅವರಿಗೆ ಒದಗಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್, ಪಿಂಟು, ಜಂಟಿ ಕಾರ್ಯದರ್ಶಿ ಅವಿನಾಶ್, ಖಜಾಂಚಿ ಎ.ಕೆ.ಉಪಾಧ್ಯಾಯ, ಮುಖ್ಯ ಸಲಹೆಗಾರರದ ಯೋಗೇಶ್ ಗರ್ಗಲ್, ಜಯಸಾಲಿಯಾನ್, ಶರತ್‍ಕುಮಾರ್ ಉಪಸ್ಥಿತರಿದ್ದರು.

Facebook Comments

Sri Raghav

Admin