ಇಂದಿನ ಪಂಚಾಗ ಮತ್ತು ರಾಶಿಫಲ (18-07-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಿದ್ಯೆ ಇಲ್ಲದವನೇ ಕುರುಡ. ಯಾಚಕರಿಗೆ ಏನನ್ನೂ ಕೊಡದವನೇ ದುಷ್ಟ. ಕೀರ್ತಿಯನ್ನು ಗಳಿಸದವನು ಮೃತನೇ ಸರಿ. ಧರ್ಮದಲ್ಲಿ ಯಾರಿಗೆ ಆಸಕ್ತಿ ಇಲ್ಲವೋ ಅವನು ಶೋಚನೀಯ. -ಚತುರ್ವರ್ಗ ಸಂಗ್ರಹ

Rashi

ಪಂಚಾಂಗ : 18.07.2018 ಬುಧವಾರ

ಸೂರ್ಯ ಉದಯ ಬೆ.06.02 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಬೆ.11.03 / ಚಂದ್ರ ಅಸ್ತ ರಾ.11.27
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ : ಷಷ್ಠಿ (ಮ.02.37)
ನಕ್ಷತ್ರ: ಉತ್ತರಫಲ್ಗುಣಿ (ಬೆ.08.20)/ ಯೋಗ: ಪರಿಘ (ಬೆ.11.34)
ಕರಣ: ತೈತಿಲ-ಗರಜೆ (ಮ.02.37-ರಾ.02.01)
ಮಳೆ ನಕ್ಷತ್ರ: ಪುನರ್ವಸು / ಮಾಸ: ಕಟಕ / ತೇದಿ: 03

ಇಂದಿನ  ವಿಶೇಷ: ಕುಮಾರ ಷಷ್ಠಿ- ಸ್ಕಂದ ಷಷ್ಠೀ, ವೈವಸ್ವತ ಸಪ್ತಮಿ

ರಾಶಿ ಭವಿಷ್ಯ : 

ಮೇಷ : ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ದೊರೆಯು ತ್ತದೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ
ವೃಷಭ : ಸಮಾಜದಲ್ಲಿ ಕೀರ್ತಿ-ಗೌರವ ದೊರೆಯು ತ್ತವೆ. ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಿ
ಮಿಥುನ: ರಾಜಕೀಯ ಕ್ಷೇತ್ರದಲ್ಲಿರುವವರು ಪ್ರಗತಿ ಸಾಧಿಸಬಹುದು. ಹಿರಿಯರ ಮಾತಿಗೆ ಮನ್ನಣೆ ನೀಡಿ
ಕಟಕ : ವಾಹನದಿಂದ ಅಪಘಾತವಾಗುವ ಸಾಧ್ಯತೆ ಇರುತ್ತದೆ. ಎಚ್ಚರ ವಹಿಸಿರಿ
ಸಿಂಹ: ವಿದ್ಯಾರ್ಥಿಗಳು ಓದಿನ ಕಡೆ ಗಮನ ಕೊಡುವುದಿಲ್ಲ
ಕನ್ಯಾ: ವಿದೇಶ ಪ್ರಯಾಣ ಮಾಡದಿರುವುದು ಉತ್ತಮ
ತುಲಾ: ಬ್ಯಾಂಕಿಂಗ್, ಆಭರಣ, ಸುಗಂಧ ಪದಾರ್ಥ ಗಳ ಉದ್ಯಮದಲ್ಲಿ ಲಾಭವಿದೆ
ವೃಶ್ಚಿಕ: ಕುಟುಂಬದಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ದೊರೆಯುತ್ತದೆ. ಅತ್ಯಧಿಕ ಲಾಭ ಗಳಿಸುವಿರಿ
ಧನುಸ್ಸು: ವ್ಯವಹಾರದಲ್ಲಿ ಯಾರನ್ನೂ ನಂಬದಿರುವುದೇ ಉತ್ತಮ
ಮಕರ: ಅನಾವಶ್ಯಕ ಚರ್ಚೆಗಳನ್ನು ಮಾಡದಿರಿ
ಕುಂಭ: ವಿದ್ಯಾರ್ಥಿಗಳಿಗೆ ಉತ್ತಮ ದಿನ
ಮೀನ: ಪಿತ್ರಾರ್ಜಿತವಾಗಿ ಬಂದ ಆಸ್ತಿ ಮಾರುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್ >

Click Here to Download : Android / iOS

Facebook Comments

Sri Raghav

Admin