ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆಗೆ ಸ್ಪೀಕರ್ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

Sumitra-mahajan--01
ನವದೆಹಲಿ, ಜು.18-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಇಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಗೊತ್ತುವಳಿ ಕುರಿತ ಚರ್ಚೆಗೆ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಸಮ್ಮತಿ ನೀಡಿದ್ದಾರೆ ಇನ್ನು ಎರಡು ಮೂರು ದಿನಗಳಲ್ಲಿ ಈ ಕುರಿತ ಚರ್ಚೆಗೆ ದಿನಾಂಕ ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.

ಇದೇ ರೀತಿಯ ಅವಿಶ್ವಾಸ ನಿರ್ಣಯಗಳನ್ನು ಮಂಡಿಸಿರುವ ಎಲ್ಲ ವಿರೋಧ ಪಕ್ಷಗಳ ಸದಸ್ಯರನ್ನು ಹೆಸರಿಸಿರುವ ಸ್ಪೀಕರ್, ಟಿಡಿಪಿಯ ಕೆಸಿನೆನಿ ಶ್ರೀನಿವಾಸ್ ತಮ್ಮ ಹೆಸರಿನಲ್ಲಿ ಗೊತ್ತುವಳಿ ಮಂಡಿಸಿದ್ದರು. ಲಾಟರಿಯಲ್ಲಿ ಅವರ ಹೆಸರು ಬಂದಿದೆ ಎಂದು ತಿಳಿಸಿದರು. ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡದಿರುವ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ ಕಳೆದ ಮಾರ್ಚ್‍ನಲ್ಲಿ ಆಡಳಿತರೂಢ ಎನ್‍ಡಿಎ ತೊರೆದಿರುವ ಟಿಡಿಪಿ ಸದಸ್ಯರು, ಲೋಕಸಭೈಯ ಶೂನ್ಯವೇಳೆಯಲ್ಲಿ ಇಂದು ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಕುರಿತ ಚರ್ಚೆಗೆ ಸ್ಪೀಕರ್ ಸಮ್ಮತಿಸಿದ್ದಾರೆ.
ಅವಿಶ್ವಾಸ ಗೊತ್ತುವಳಿಗೆ ಅನುಮತಿ ನೀಡಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಈ ನಿರ್ಣಯ ಕುರಿತ ಚರ್ಚೆಗೆ ದಿನಾಂಕ ತಿಳಿಸುವುದಾಗಿ ಅವರು ಹೇಳಿದರು.

ಅವಿಶ್ವಾಸ ನಿರ್ಣಯವನ್ನು ಎದುರಿಸಲು ಸರ್ಕಾರ ಸಿದ್ದವಾಗಿದೆ ಸದನದ್ಲಿ ಬಹುಮತ ಹೊಂದಿರುವುದರಿಂದ ಇದರ ವಿರುದ್ಧ ಜಯ ಸಾಧಿಸಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಹೇಳಿದರು. ಟಿಡಿಪಿ ಸದಸ್ಯರು ಸಂಸತ್ತಿನ ಬಜೆಟ್ ಅಧಿವೇಶನದ ವೇಳೆಯೂ ಸಹ ಅವಿಶ್ವಾಸ ನಿರ್ಣಯವೊಂದನ್ನು ಮಂಡಿಸಿದ್ದರು. ಆದರೆ ಇದು ಕ್ರಮಬದ್ಧವಾಗಿಲ್ಲದ ಕಾರಣ ಸ್ಪೀಕರ್ ಅದನ್ನು ನಿರಾಕರಿಸಿದ್ದರು.

Facebook Comments

Sri Raghav

Admin