ಸದನದ ಆರಂಭದಲ್ಲೇ ಟಿಡಿಪಿ ಗದ್ದಲ, ರಾಜ್ಯಸಭೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Rahjyas--bha

ನವದೆಹಲಿ, ಜು.18-ಸಂಸತ್ತಿನ ಮುಂಗಾರು ಅಧಿವೇಶನದ ಆರಂಭದ ದಿನವೇ ಇಂದು ರಾಜ್ಯಸಭೆ ಮುಂದೂಡಿಕೆಗೆ ಸಾಕ್ಷಿಯಾಯಿತು. ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಕುರಿತು ಕೂಡಲೇ ಚರ್ಚೆಗೆ ಅವಕಾಶ ನೀಡಬೇಕೆಂದು ತೆಲುಗು ದೇಶಂ ಪಾರ್ಟಿ(ಡಿಟಿಪಿ) ಸದಸ್ಯರು ಪಟ್ಟು ಹಿಡಿದ ಕಾರಣ ಸದನದಲ್ಲಿ ಗದ್ದಲದ ವಾತಾವರಣ ಉಂಟಾಗಿ ಸಭೆಯನ್ನು ಕೆಲಕಾಲ ಮುಂದೂಡಲಾಯಿತು.

ಮೇಲ್ಮನೆಯಲ್ಲಿ ಏಳು ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಕಲಾಪ ಆರಂಭವಾಯಿತಾದರೂ ಪ್ರಾರಂಭದಲ್ಲೇ ಪ್ರತಿಭಟನೆಯ ಬಿಸಿ ತಟ್ಟಿತು. ಶೂನ್ಯ ವೇಳೆಯಲ್ಲಿ ಟಿಡಿಪಿ ಸದಸ್ಯ ಸಿ.ಎಂ.ರಮೇಶ್ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮತ್ತು ಸ್ಪೆಷಲ್ ಪ್ಯಾಕೇಜ್ ಕುರಿತು ಚರ್ಚೆಗೆ ತಕ್ಷಣ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.

ಕಲಾಪವನ್ನು ರದ್ದುಗೊಳಿಸಿ ಈ ವಿಷಯ ಕುರಿತು ಚರ್ಚೆಗೆ ಅವಕಾಶ ನೀಡಲು ಸಭಾಪತಿ ಡಾ. ಎಂ.ವೆಂಕಯ್ಯ ನಾಯ್ಡು ನಿರಾಕರಿಸಿದರು. ನಾಳೆ ಅಥವಾ ನಾಡಿದ್ದು ಈ ವಿಚಾರ ಕುರಿತ ಚರ್ಚೆಗೆ ಅವಕಾಶ ನೀಡುವುದಾಗಿ ಅವರು ತಿಳಿಸಿದರು. ಈಗಲೇ ಈ ಬಗ್ಗೆ ಚರ್ಚೆ ನಡೆಸಬೇಕೆಂದು ರಮೇಶ್ ಪಟ್ಟು ಮುಂದುವರಿಸಿದಾಗ ಆಂಧ್ರಪ್ರದೇಶದ ಕಾಂಗ್ರೆಸ್ ಸದಸ್ಯ ಕೆ.ವಿ.ಪಿ ರಾಮಚಂದ್ರ ರಾವ್ ಇದಕ್ಕೆ ಬೆಂಬಲ ಸೂಚಿಸಿ ಘೋಷಣೆ ಪತ್ರ ಪ್ರದರ್ಶಿಸಿದರು. ಇದಕ್ಕೆ ಸಭಾಪತಿ ಆಕ್ಷೇಪ ವ್ಯಕ್ತಪಡಿಸಿದರು. ಟಿಡಿಪಿ ಸದಸ್ಯರು ಈ ವಿಷಯದ ಬಗ್ಗೆ ಪಟ್ಟು ಹಿಡಿದು ಗದ್ದಲ ಸೃಷ್ಟಿಸಿದ್ದರಿಂದ ನಾಯ್ಡು ಸದನದ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

Facebook Comments

Sri Raghav

Admin