ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್‍ಗೆ ಚಿನ್ನ

ಈ ಸುದ್ದಿಯನ್ನು ಶೇರ್ ಮಾಡಿ

Neeraj-Chopra--01

ನವದೆಹಲಿ, ಜು.18- ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಸೊಟ್ಟೆವಿಲ್ಲೆ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಹೆಮ್ಮೆಯ ಪಟು ನೀರಜ್ ಚೋಪ್ರಾ ಜಾವೆಲಿನ್ ಥ್ರೋ(ಭರ್ಜಿ ಎಸೆತ)ನಲ್ಲಿ ಬಂಗಾರದ ಪದಕ ಗೆದ್ದು ದೇಶಕ್ಕೆ ಮತ್ತೆ ಕೀರ್ತಿ ತಂದಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಟ್ರಿನಿಡಾಡ್‍ನ ಕೇಶೋರ್ನ್ ವ್ಯಾಕ್ಲೋಟ್ ಅವರನ್ನು ಹಿಂದಿಕ್ಕಿದ ನೀರಜ್ ಸುವರ್ಣ ಸಾಧನೆ ಮಾಡಿದರು.

ನೀರಜ್ 85/17 ಮೀಟರ್ ದೂರಕ್ಕೆ ಭರ್ಜಿ ಎಸೆದು ಬಂಗಾರದ ಬೇಟೆಯಾಡಿದರು. ಮೊಲ್ಡೊವಾದ ಆಂಡ್ರಿಯಾನ್ ಮಾರ್ಡರೆ(81.48 ಮೀ.) ಹಾಗೂ ಲುಥುವೇನಿಯಾದ ಎಡಿಸ್ ಮತುಸೆವಿಸಿಯಸ್(79.31 ಮೀ.) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪದಕ ಗೆದ್ದರು. ಟ್ರಿನಿಡಾಡ್‍ನ ಕೇಶೋರ್ನ್ ವ್ಯಾಕ್ಲೋಟ್ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಪಾಣಿಪಟ್‍ನ 20 ವರ್ಷದ ಪ್ರತಿಭಾನ್ವಿತ ಜಾವೆಲೆನ್ ಎಸೆತಗಾರ ನೀರನ್ 2016ರ ವಿಶ್ವ ಜ್ಯೂನಿಯರ್ ಚಾಂಪಿಯನ್‍ಶಿಪ್‍ನಲ್ಲಿ 86.48 ಮೀಟರ್ ದೂರಕ್ಕೆ ಭರ್ಜಿ ಎಸೆದು ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಸುದ್ದಿಯಾಗಿದ್ದರು. ಈ ವರ್ಷದ ಆರಂಭದಲ್ಲಿ ನೀರಜ್ ಗೋಲ್ಡ್ ಕೋಸ್ಟ್‍ನಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್‍ನಲ್ಲೂ ಸಹ ಬಂಗಾರದ ಪದಕ ಜಯಿಸಿದ್ದರು.

Facebook Comments

Sri Raghav

Admin